
74ನೇ ಗಣರಾಜ್ಯೋತ್ಸವದ ಪ್ರಯುಕ್ತ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆರೋಗ್ಯ ಸೇವೆಯನ್ನು ಸಲ್ಲಿಸುತ್ತಿರುವ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಕೆವಿಜಿ ವೈದ್ಯಕೀಯ ಆಸ್ಪತ್ರೆಯನ್ನು “ಅಸಾದಾರಣವಾಗಿ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆ” ಎಂದು ಗುರುತಿಸಿ ಗೌರವಿರಿಸಿದ್ದಾರೆ.ಜಿಲ್ಲೆಯಲ್ಲಿ ಒಂದು ಖಾಸಗಿ ಆಸ್ಪತ್ರೆ ಮತ್ತು ಒಂದು ಸರಕಾರಿ ಆಸ್ಪತ್ರೆಯನ್ನು ಮಾತ್ರ ಗೌರವಿಸಿದ್ದು, ಈ ಸಾಲಿನಲ್ಲಿ ಸುಳ್ಯದ ಕೆ ವಿ ಜಿ ವೈದ್ಯಕೀಯ ಸಂಸ್ಥೆ ಆಯ್ಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿ ಕುಮಾರ್ ಗುರುತಿಸಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳು ಆಗಿರುವ ಶ್ರೀ ಅಕ್ಷಯ ಕೆ ಸಿ ಹಾಗೂ ಕಾಲೇಜಿನ ಪ್ರಾಂಶುಪಾಲರು ಆಗಿರುವ ಡಾಕ್ಟರ್ ನೀಲಾಂಬಿಕೆ ನಟರಾಜನ್ ಹಾಜರಿದ್ದು ಗೌರವವನ್ನು ಸ್ವೀಕರಿಸಿದರು.

