
ಸುಳ್ಯ: ಬುಖಾರಿಯಾ ಜುಮಾ ಮಸ್ಜಿದ್ ಕಳಂಜ ಇದರ ಆಶ್ರಯದಲ್ಲಿ ಗಣರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಖತೀಬ್ ಉಸ್ತಾದರ ನೇತೃತ್ವದಲ್ಲಿ ನೆರವೇರಿಸಲಾಯಿತು. ಮಸೀದಿ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಪಿ.ಎಸ್ ಕಳಂಜ, ಎ.ಬಿ ಮೊಯಿದೀನ್, ಖತೀಬರು ಸೇರಿ ಧ್ವಜಾರೋಹಣ ನೆರವೇರಿಸಿದರು. ಇಶ್ಫಾಕ್ ಕಳಂಜರವರು ಸಂವಿಧಾನವನ್ನು ಪಠಿಸುವದರ ಮೂಲಕ ಎಲ್ಲರೂ ಪ್ರತಿಜ್ಞೆ ಮಾಡಿದರು. ಖತೀಬ್ ಅಬ್ಬಾಸ್ ಮದನಿರವರು ದುವಾ ಮಾಡಿದರು. ಬಿಜೆಎಂ ಕಾರ್ಯದರ್ಶಿ ಮಜೀದ್ ಕಳಂಜ, ಹಂಝ ಕಳಂಜ, ಇಸ್ಮಾಯಿಲ್ ಎನ್, ಮಹಮ್ಮದ್ ಎನ್, ಹಸೈನಾರ್ ಎನ್, ಫಾರೂಕ್ ಕಳಂಜ, ಇಬ್ರಾಹಿಂ ಕೆ, ಡಿ.ಸಿ ಮಹಮ್ಮದ್, ಸಿನಾನ್ ಕೆ ಮತ್ತು ಮಕ್ಕಳು ಉಪಸ್ಥಿತರಿದ್ದರು. ರಾಷ್ಟ್ರ ಗೀತೆಯ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.



