
ಅಡಿಕೆಗೆ ಹಳದಿ ಎಲೆರೋಗ ಹಲವು ವರ್ಷಗಳಿಂದ ರಾಜ್ಯದ ಹಲವು ಭಾಗದಲ್ಲಿ ಬೆಳೆಗಳಿಗೆ ಬಾಧಿಸುತ್ತಿದ್ದು,ಹಲವು ರೈತರು ಇದರ ಹೊಡೆತಕ್ಕೆ ನಲುಗಿದ್ದಾರೆ,ಈಗಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಡಿಕೆ ಬೆಳೆಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಹಾಗಾಗಿ ಕೆ ಪಿ ಸಿ ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಾಗೂ ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯರವರ ನೇತ್ರತ್ವದಲ್ಲಿ ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ,ರಾಜ್ಯ ವ್ಯಾಪಿಯಾಗಿ ಅಡಿಕೆ ಬೆಳೆಗಾರರ ಹಿತ ಕಾಯ್ದುಕೊಳ್ಳುವುದಕ್ಕೋಸ್ಕರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಹೇಳಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೊಸ್ಟಿ ನಡೆಸಿ ಮಾತನಾಡಿ,



೨೦೧೧ ಲೋಕ ಸಭೆಯಲ್ಲಿ ಈ ಹಳದಿ ಎಲೆ ರೋಗದ ಬಗ್ಗೆ ಚರ್ಚೆ ನಡೆಯುತ್ತದೆ ಆಗ ಚಿಕ್ಕ ಮಂಗಳೂರು ಮತ್ತು ಶಿವಮೊಗ್ಗ ಲೋಕಸಭಾ ಸದಸ್ಯರು ಲೋಕಸಬೆಯಲ್ಲಿ ಹಳದಿ ಎಲೆ ರೋಗದ ಬಗ್ಗೆ ಸಭೆಯ ಗಮನ ಸೇಳೆಯುತ್ತಾರೆ ಮತ್ತು ಪರಿಹಾರಕ್ಕೆ ಒತ್ತಾಯಿಸುತ್ತಾರೆ ಒತ್ತಾಯಿಸುತ್ತಾರೆ.ಇದರ ಆದಾರದಲ್ಲಿ ಗೋರಕ್ ಸಿಂಗ್ ಕಮಿಟಿ ನಿರ್ಮಾಣ ಮಾಡಿ ಇಲ್ಲಿನ ಅಧಿಕಾರಿಗಳ ತಂಡ ಪರಿಶೀಲನೆಗೆ ಶಿವಮೊಗ್ಗ, ಚಿಕ್ಕಮಂಗಳೂರಿಗೆ ಬರುತ್ತಾರೆ ಆದರೆ ಅವತ್ತು ದಕ್ಷಿಣ ಕನ್ನಡ ಇದರಿಂದ ವಂಚನೆಯಾಗುತ್ತದೆ, ಶಿವಮೊಗ್ಗದಂತಹ ಭಾಗಗಳಿಗೆ ಪರಿಹಾರ ದೊರೆಯುತ್ತದೆ, ಉಚಿತ ಔಷದ ದೊರೆಯುತ್ತದೆ, ಉಚಿತ ಗೊಬ್ಬರ ದೊರೆಯುತ್ತದೆ ಹಲವರ ಸಾಲಮನ್ನ ಮಾಡಲಾಗಿತ್ತು ಈ ಎಲ್ಲಾ ಯೋಜನೆಯಿಂದ ದಕ್ಷಿಣ ಕನ್ನಡ ಹೊರತಾಗಿದೆ ಕಾರಣ ಇಲ್ಲಿಯ ಲೊಕಸಭಾ ಸದಸ್ಯರ ಲೋಪದಿಂದ. ಈಗಲೂ ಸ್ವತಹ ಅಡಿಕೆ ಬೆಳೆಗಾರರು ಕೇಂದ್ರ ಕೃಷಿ ಮಂತ್ರಿಗಳಾಗಿದ್ದಾರೆ,ರಾಜ್ಯ ಸಚಿವರಿದ್ದಾರೆ,ಶಾಸಕರಿದ್ದಾರೆ, ಸಂಸದರಿದ್ದಾರೆ, ಇವಾರಾರಿಗೂ ರೈತರ ಸಮಸ್ಯೆ ಕಾಣದೆ ಹೋದದ್ದು ಒಂದು ದುರಂತ. ಇಡೀ ದೇಶದಲ್ಲಿ ಗುಜರಾತಿಗಳಿಗೆ ವ್ಯಾಪಾರಕ್ಕೆ ಸೌಲಭ್ಯ ಕಲ್ಪಿಸುವ ರೀತಿ ಆಗಿದೆ. ಇಲ್ಲಿಯ ಅಡಿಕೆ ಬೆಳೆಗಾರರಿಗೆ ಏನಿಲ್ಲ , ಈಗಾಗಲೆ ತೆರಿಗೆ ರಹಿತವಾಗಿ 17000 ಮೆಟ್ರಿಕ್ ಟನ್ ಅಡಿಕೆ ಆಮದೀಕರಣಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಕೊಟ್ಟಿದೆ.ಇಂಡೋನೇಶಿಯ, ಮಲೇಶಿಯ, ಥೈಲಾಂಡ್, ನೇಪಾಳ ಗಡಿ ಭಾಗದಿಂದ ಅಡಿಕೆ ಈ ದೇಶಕ್ಕೆ ಆಮದು ಆಗ್ತಾ ಇದೆ.ಈಗಿನ ಸರಕಾರ ರೈತರ ಪರ ಚಿಂತಿಸದೆ, ಹಳದಿ ಎಲೆ ರೋಗದ ಬಗ್ಗೆ ಚಿಂತಿಸದೆ ,ಎಲೆಚುಕ್ಕಿರೋಗದ ಬಗ್ಗೆ ಗಮನ ಹರಿಸದೇ , ರೈತರಿಗೆ ಪರಿಹಾರ ನೀಡದೇ ಇರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಗೋರಕ್ ಸಿಂಗ್ ವರದಿ ಅನುಷ್ಠಾನ ಆಗಲು, ಹಳದಿ ರೋಗ, ಎಲೆ ಚುಕ್ಕಿ ರೋಗದಿಂದ ನಾಶವಾದ ಅಡಿಕೆ ಕೃಷಿ ಕಂಗಾಲಾಗಿರುವ ಕೃಷಿಕರಿಗೆ ಸೂಕ್ತ ಪರಿಹಾರ ಒದಗಿಸಲು ಹೋರಾಟ ನಡೆಸಲಿದ್ದೇವೆ.ಮತ್ತು ಮುಂದಿನ ಬಾರಿ ಇದನ್ನೇ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿಯೂ ಸೇರಿಸಲು ಪ್ರಯತ್ನ ಪಡುತ್ತೇವೆ ಎಂದರು. ನಮ್ಮ ಹೋರಾಟದಲ್ಲಿ ಅಡಿಕೆ ಬೆಳೆಗಾರರ ಸಾಲ ಸಂಪೂರ್ಣ ಮನ್ನಾ ಮಾಡುವ ಬೇಡಿಕೆ,ಹೊಸ ಕೃಷಿ ನಡೆಸಲು ಹೊಸ ಸಾಲ ನೀಡುವ ಬೇಡಿಕೆ, ಅಡಿಕೆಯ ಬೇರೆ ಬೇರೆ ಉಪಯೋಗದ ಕಾರ್ಖಾನೆಗಳು ಸ್ಥಾಪನೆಯಾಗಬೇಕುಎನ್ನುವ ಬೇಡಿಕೆ, ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ಬಾಧಿಸಿದ ಕೃಷಿಗೆ ಉಚಿತ ಔಷಧಿ, ಗೊಬ್ಬರ ಕೊಡಬೇಕು ಎನ್ನುವ ಬೇಡಿಕೆ, ಅಡಿಕೆ ಮಂಡಳಿ ರಚನೆಯಾಗಬೇಕು, ಆಮದು ಕಡಿಮೆಯಾಗಬೇಕು. ಈಗ ಇರುವ ಧಾರಣೆ ಪ್ರತಿ ರೈತನಿಗೆ ದೊರೆಯುವಂತೆ ಆಗಬೇಕು ಇನ್ನು ಹಲವು ಬೇಡಿಕೆ ಮುಂದಿರಿಸಿ, ರೈತ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಹೋರಾಟ ನಡೆಸಲಿದೆ. ಈ ಬಗ್ಗೆ ಮಂಗಳೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರ ಜೊತೆ ಈ ಕುರಿತು ಮಾತುಕತೆ ನಡೆಸಲಾಗಿದೆ ಧನಂಜಯ ಅಡ್ಪಂಗಾಯ ಹೇಳಿದ್ದಾರೆ.


ಕೆ ಪಿ ಸಿ ಸಿ ಮಾಧ್ಯಮ ವಕ್ತಾರ ಭರತ್ ಮುಂಡೋಡಿ ಮಾತನಾಡಿ ಕಾಂಗ್ರೇಸ್ ಹಿಂದಿನಿಂದಲೂ ಅಡಿಕೆ ಬೆಳೆಗಾರರ ಪರವಾಗಿ ನಿಂತಿತ್ತು, ಎಸ್ ಎಂ ಕೃಷ್ಣ ಮುಖ್ಯ ಮಂತ್ರಿ ಆಗಿದ್ದಾಗ ಕ್ಯಾಂಪ್ಕೂ ಮೂಲಕ ಬೆಂಬಲ ಬೆಲೆ ನೀಡಿತ್ತು, ಕೇಂದ್ರ ಸಾಲ ಸೌಲಭ್ಯ, ಸಿದ್ದರಾಮಯ್ಯ ಸರಕಾರದಲ್ಲಿ ಸಾಲಮನ್ನಾ ಯೋಜನೆ, ಕೊಳೆರೋಗಕ್ಕೆ ಪರಿಹಾರ ಆರಂಭಿಸುವುದರ ಮೂಲಕ ರೈತರ ಪರವಾಗಿ ನಿಂತಿತ್ತು, ಆದರೆ ಈಗಿನ ಸರಕಾರದಲ್ಲಿ ಅಡಿಕೆಗೆ ಭವಿಷ್ಯವಿಲ್ಲ, ಎನ್ನುವುದರ ಮೂಲಕ ರೈತರ ಭವಿಷ್ಯದ ಮೇಲೆ ತೂಗು ಕತ್ತಿ ಇಟ್ಟಿದೆ,ಆದರೂ ಈ ಬಾಗದ ರೈತರು ಹಳದಿ ರೋಗದ ಬಗ್ಗೆ ಮಾತನಾಡದೇ ಇರುವುದು ಬೇಸರ ತಂದಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ,ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಕಾಂಗ್ರೆಸ್ ವಕ್ತಾರ ನಂದರಾಜ ಸಂಕೇಶ ಮೊದಲಾದವರಿದ್ದರು.
