ಸುಬ್ರಹ್ಮಣ್ಯದಲ್ಲಿ ಮುಸ್ಲಿಮ್ ಯುವಕನ ಮೇಲೆ ಹಲ್ಲೆ: ಪ್ರಚೋದನೆ ನೀಡಿದ ಕಟೀಲ್ ಮೇಲೆ ಪ್ರಕರಣ ಯಾವಾಗ: ರಿಯಾಝ್ ಪರಂಗಿಪೇಟೆ.

ಸುಬ್ರಹ್ಮಣ್ಯದಲ್ಲಿ ಮುಸ್ಲಿಮ್ ಯುವಕನ ಮೇಲೆ ಹಲ್ಲೆ: ಪ್ರಚೋದನೆ ನೀಡಿದ ಕಟೀಲ್ ಮೇಲೆ ಪ್ರಕರಣ ಯಾವಾಗ: ರಿಯಾಝ್ ಪರಂಗಿಪೇಟೆ.


ಮಂಗಳೂರು: ಪ್ರಚೋದನೆ ನೀಡುವ ಮಾತುಗಳ ಮೂಲಕ ಸುಬ್ರಹ್ಮಣ್ಯದಲ್ಲಿ ಮುಸ್ಲಿಂ ಯುವಕನ ಮೇಲೆ ಗುಂಪು ಹಲ್ಲೆಗೆ ಕಾರಣಕರ್ತರಾದ ಮಂಗಳೂರು ಸಂಸದರ ಮೇಲೆ ದ.ಕ.ಪೊಲೀಸ್ ವರಿಷ್ಠಾಧಿಕಾರಿಯವರು ಯಾವಾಗ ಕೇಸು ದಾಖಲಿಸಬಹುದು ? ಎಂದು ಎಸ್’ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸುಬ್ರಹ್ಮಣ್ಯದಲ್ಲಿ ಮುಸ್ಲಿಮ್ ಯುವಕನ ಮೇಲೆ ಸಂಘಪರಿವಾರದ ಗುಂಪು ದಾಳಿ ನಡೆಸಲು ಸಂಸದರ ಹೇಳಿಕೆಯೇ ಪ್ರಚೋದನೆಯಾಗಿದೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ನೀವು ರಸ್ತೆ, ಚರಂಡಿ ಮುಂತಾದ ಸಣ್ಣ ವಿಷಯಗಳ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಹೇಳಿಕೆ ನೀಡಿದ್ದರು.

ರಾಜ್ಯ