ಸುಳ್ಯ ಜಾತ್ರೋತ್ಸವ- ಪೂರ್ವಭಾವಿ ಸಭೆ;ಸಂತೆ ವ್ಯಾಪಾರಕ್ಕಿಲ್ಲ ನಿರ್ಭಂದ.

ಸುಳ್ಯ ಜಾತ್ರೋತ್ಸವ- ಪೂರ್ವಭಾವಿ ಸಭೆ;ಸಂತೆ ವ್ಯಾಪಾರಕ್ಕಿಲ್ಲ ನಿರ್ಭಂದ.

ಸುಳ್ಯ: ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವ ಜ.03 ರಿಂದ ಜ.12 ರವರೆಗೆ ನಡೆಯಲಿದ್ದು ಸಂತೆ ಈ ಹಿಂದೆ ಯಾವ ರೀತಿ ಸಂತೆ ಏಲಂ ಆಗುತ್ತಿತ್ತೋ ಹಾಗೆಯೇ ಮುಂದುವರಿಸಿ ಎಲ್ಲರಿಗೂ ಮುಕ್ತ ಅವಕಾಶ ನೀಡಲು ಜಾತ್ರೋತ್ಸವದ ಪೂರ್ವಬಾವಿ ಸಭೆಯಲ್ಲಿ ನಿರ್ಣಯಿಸಲಾಗಿದೆ .ಕಳೆದವಾರ ಹಿಂದೂ ಸಂಘಟನೆಯವರು ಅನ್ಯಧರ್ಮಿಯರಿಗೆ ವ್ಯಾಪರದ ಸ್ಥಳ ಏಲಂ ನಲ್ಲಿ ಭಾಗವಹಿಸಲು ಅವಕಾಶ ನೀಡ ಬಾರದು ಎಂದು ದೇವಸ್ಥಾನಕ್ಕೆ ಮನವಿ ಮಾಡಿತ್ತು.ಈ ಬಗ್ಗೆ ಮತ್ತು
ಜಾತ್ರೋತ್ಸವದ ಬಗ್ಗೆ ಚರ್ಚಿಸಲು ಜ.2 ರಂದು ದೇವಸ್ಥಾನದಲ್ಲಿ ನಡೆದ ಸಭೆಯನ್ನು ನಡೆಸಲಾಯಿತು. ಈ ಅಂಗಡಿಗಳ ಏಲಂ ಬಗ್ಗೆ ಮತ್ತು ಸಂಘಟನೆಗಳ ಮನವಿ ಬಗ್ಗೆದಾಮೋದರ ಮಂಚಿ ಮತ್ತು ರವಿ ಮತ್ತಿತರರು ವಿಷಯ ಪ್ರಸ್ತಾಪಿಸಿದರು.
ಉತ್ತರಿಸಿದ ಕೃಪಾಶಂಕರ ಅಂಗಡಿಗಳ ಏಲಂ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಮಾಡಿದ್ದೇವೆ ಎಂದು ಹೇಳಿದರು.ಆಗ ವೆಂಕಪ್ಪ ಗೌಡ,ಪಿ.ಎಸ್.ಗಂಗಾಧರ್ ,ಜಯಪ್ರಕಾಶ್ ರೈ, ಗೋಕುಲದಾಸ್ ಮತ್ತಿತರರು ಇಲಾಖೆಯ ನಿಯಮದಲ್ಲಿ ಏನೇನಿದೆ ಓದಿ ಹೇಳಿ ಎಂದು ಹೇಳಿದರು. ಧಾರ್ಮಿಕ ದತ್ತಿ ಇಲಾಖೆಯ ನಿಯಮವನ್ನು ಓದಿ ಅದರಲ್ಲಿ ದೇವಸ್ಥಾನಕ್ಕೆ ಸಂಬಂದಪಟ್ಟ ಕಟ್ಟಡದಲ್ಲಿ ಟೆಂಡರ್‌ನ್ನು ಇತರರಿಗೆ ನೀಡಬಾರದೆಂದು ಇತ್ತು. ಹೊರಗಿನ ಸಂತೆ ಏಲಂ ಬಗ್ಗೆ ಯಾವುದೇ ನಿಬಂಧನೆಗಳು ಇರಲಿಲ್ಲ.ಈ ಹಿನ್ನಲೆಯಲ್ಲಿ ಹಿಂದೆ‌ ಇದ್ದ ರೀತಿಯಲ್ಲಿ ಏಲಂ ಮಾಡಲು ನಿರ್ಧರಿಸಲಾಯಿತು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಜಾತ್ರೋತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಕೊರೊನಾ ಮಾರ್ಗಸೂಚಿಗಳ ಬಗ್ಗೆ ತಿಳಿಸಿದರು. ಒಳಾಂಗಣದಲ್ಲಿ ಮಾಸ್ಕ್ ಹಾಕುವಂತೆ ಹಾಗೂ ಮಾರ್ಗಸೂಚಿಗಳನ್ನು ಅನುಸರಿಸುವಂತೆ ತಿಳಿಸಿದರು.
ಎಸ್.ಐ.ದಿಲೀಪ್ ಎಂ.ಆರ್. ವಾಹನ ಪಾರ್ಕಿಂಗ್ ,ಮತ್ತು ಜಾತ್ರೋತ್ಸವ ಸಂದರ್ಭದಲ್ಲಿ ಸಿ.ಸಿ.ಕೆಮರಾಗಳನ್ನು ಅಳವಡಿಸುವಂತೆ ಸೂಚಿಸಿದರು.ಎ.ಪಿ.ಎಂ.ಸಿ ಪ್ರಾಂಗಣ,ಪ್ರಭು ಗ್ರೌಂಡ್ ಬಳಿ ವಾಹನ ಪಾರ್ಕಿಂಗ್ ಮಾಡುವ ಬಗ್ಗೆ ನಿರ್ಣಯ ಮಾಡಲಾಯಿತು.
ಜಾತ್ರಾ ಸಮಯದಲ್ಲಿ ಹೆಚ್ಚುವರಿ ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ನಿಯೋಜಿಸುವಂತೆ ಮನವಿ ನೀಡುವ ಬಗ್ಗೆ ನಿರ್ಣಯಿಸಲಾಯಿತು.ಸ್ವಚ್ಛತೆಯ ಬಗ್ಗೆ ಅಲ್ಲಲ್ಲಿ ಡಸ್ಟ್ ಬಿನ್ ವ್ಯವಸ್ಥೆ ಮಾಡುವ ಬಗ್ಗೆ,ಅಂಗಡಿಯವರಿಗೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮನವರಿಗೆ ಮಾಡುವ ಬಗ್ಗೆ ಮತ್ತು ಬಟ್ಟೆ ಚೀಲಗಳ ಅಂಗಡಿ ಹಾಕುವ ಬಗ್ಗೆ ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕ ಹೇಳಿದರು. ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಎನ್.ಜಯಪ್ರಕಾಶ್ ರೈ, ಲಿಂಗಪ್ಪ ಗೌಡ ಕೇರ್ಪಳ, ಎಂ.ಮೀನಾಕ್ಷಿ ಗೌಡ,ಎಸ್.ಐ.ದಿಲೀಪ್, ಡಾ.ನಂದಕುಮಾರ್,ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ,ಸದಸ್ಯೆ ಕಿಶೋರಿ ಶೇಟ್ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯ