ಇರಾನ್ ನಲ್ಲಿ ಪ್ರತಿಭಟನೆ; ಒಂದು ವಾರದಲ್ಲಿ 72 ಮಂದಿ ಮೃತ್ಯು: ಎನ್‌ಜಿಒ

ಇರಾನ್ ನಲ್ಲಿ ಪ್ರತಿಭಟನೆ; ಒಂದು ವಾರದಲ್ಲಿ 72 ಮಂದಿ ಮೃತ್ಯು: ಎನ್‌ಜಿಒ

ಟೆಹ್ರಾನ್: ಮಷಾ ಅಮಿನಿ ಸಾವಿನ ಬಳಿಕ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಮೇಲೆ ಇರಾನ್ ಸೇನೆ ಪ್ರಹಾರ ನಡೆಸಿದ್ದು, ಕಳೆದ ಒಂದು ವಾರದಲ್ಲಿ ಖುರ್ದಿಶ್ ಜನಸಂಖ್ಯೆ ಇರುವ ಪ್ರದೇಶದಲ್ಲಿ 56 ಮಂದಿ ಸೇರಿದಂತೆ ದೇಶಾದ್ಯಂತ 72 ಮಂದಿಯನ್ನು ಹತ್ಯೆ ಮಾಡಿದೆ ಎಂದು ಎನ್‌ಜಿಒ ತಿಳಿಸಿದ್ದು, ಈ ಬಗ್ಗೆ newindianexpress.com ವರದಿ ಮಾಡಿದೆ. ಪೊಲೀಸರ ಕಸ್ಟಡಿಯಲ್ಲಿ 22 ವರ್ಷದ ಯುವತಿ ಅಮಿನಿ ಮೃತಪಟ್ಟ ಘಟನೆ ಬಳಿಕ ಸೆಪ್ಟೆಂಬರ್ ಮಧ್ಯಭಾಗದಿಂದ ಪ್ರತಿಭಟನೆ ನಡೆಯುತ್ತಿದೆ. ಎಲ್ಲ ಬುಡಕಟ್ಟು ಜನಾಂಗದವರು, ಸಾಮಾಜಿಕ ವರ್ಗದವರು ಮತ್ತು ಪ್ರಾಂತ್ಯಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ತೀವ್ರಗೊಳ್ಳುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ನಡೆಸಿದ ಈ ಪ್ರಹಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಂಗಣ್ಣಿಗೆ ಕಾರಣವಾಗಿದೆ. ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನವಾಗಿ ಖುರ್ದಿಷ್ ಗುಂಪಿನ ಮೇಲೆ ಪ್ರಹಾರ ಮಾಡುವ ಉದ್ದೇಶದಿಂದ ನೆರೆಯ ಇರಾಕ್‌ನ ನೆಲೆಗಳ ಮೇಲೆ ಕೂಡಾ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ ಎಂದು ವರದಿಯಾಗಿದೆ.ನಾರ್ವೆ ಮೂಲದ ಇರಾನ್ ಹೂಮನ್ ರೈಟ್ಸ್
(ಐಎಚ್‌ಆರ್) ಪ್ರಕಾರ, ದೇಶಾದ್ಯಂತ ಇದುವರೆಗೆ ಇರಾನಿ ಸೇನೆ 51 ಮಕ್ಕಳು ಮತ್ತು 21 ಮಂದಿ ಮಹಿಳೆಯರು ಸೇರಿದಂತೆ 416 ಮಂದಿಯನ್ನು ಹತ್ಯೆ ಮಾಡಿದೆ. ಕಳೆದ ಒಂದು ವಾರದಲ್ಲೇ 72 ಮಂದಿ ಮೃತಪಟ್ಟಿದ್ದು, ಈ ಪೈಕಿ 56 ಮಂದಿ ಪಶ್ಚಿಮದಲ್ಲಿ ಖುರ್ದಿಷ್ ಜನಸಂಖ್ಯೆ ಅಧಿಕ ಇರುವ ಪ್ರದೇಶದವರು ಎಂದು ಹೇಳಿದೆ.ಖುರ್ದಿಶ್ ಜನಸಂಖ್ಯೆ ಅಧಿಕ ಇರುವ ಪಶ್ಚಿಮ ಇರಾನ್‌ನಲ್ಲಿ ಅಂದರೆ ಮಹಾಬಾದ್, ಜವನರೌಡ್ ಮತ್ತು ಪಿರಾನ್ ಶಹರ್ ನಗರಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿದ್ದು, ಸಾಮಾನ್ಯವಾಗಿ ಮೃತಪಟ್ಟ ಪ್ರತಿಭಟನಾಕಾರರ ಅಂತ್ಯಸಂಸ್ಕಾರದ ಸ್ಥಳದಿಂದಲೇ ಈ ಪ್ರತಿಭಟನೆಗಳು ಆರಂಭವಾಗುತ್ತಿವೆ ಎಂದು
newindianexpress.com Bor@w.

ಅಂತರಾಷ್ಟ್ರೀಯ