ವಿಟ್ಲ ಕೊಡಪದವು ಸಹಕಾರಿ ಸಂಘದ ಕಛೇರಿಯಲ್ಲಿ ಕಳ್ಳತನಕ್ಕೆ ಯತ್ನ

ವಿಟ್ಲ ಕೊಡಪದವು ಸಹಕಾರಿ ಸಂಘದ ಕಛೇರಿಯಲ್ಲಿ ಕಳ್ಳತನಕ್ಕೆ ಯತ್ನ

ವಿಟ್ಲ ಸಮೀಪದ ಕೋಡಪದವು ವ್ಯವಸಾಯ ಸೇವಾ
ಸಹಕಾರಿ ಬ್ಯಾಂಕ್ ಗೆ ಕಳ್ಳರು ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಬಳಿಕ ಬರಿಗೈಯಲ್ಲಿ ವಾಪಾಸು ಹೋಗಿರುವ ಘಟನೆ ನಡೆದಿದೆ.
ಮುಂಬಾಗಿಲಿನ ಶಟರ್ ನ ಕೊಯ್ದು ಒಳಗೆ ನುಗ್ಗಿದ ಕಳ್ಳರು ಎಲ್ಲಾ ಜಾಲಾಡಿದ್ದಾರೆ. ಸೇಪ್ ಲಾಕರ್ ವ್ಯವಸ್ಥೆ ಇರುವ ಬ್ಯಾಂಕ್ ಆಗಿದ್ದರಿಂದ ಕಳ್ಳರು ಬರಿಗೈಯಲ್ಲಿ ವಾಪಾಸು ಹೋಗಿದ್ದಾರೆ.ಬೀಗ ಹಾಕುವ ಸ್ಥಳದಲ್ಲಿ ಶಟರ್ ನ್ನು ಗ್ಯಾಸ್ ಕಟ್ಟಿಂಗ್ ಮೂಲಕ ತುಂಡು ಮಾಡಿ ಕಬ್ಬಿಣದ ಲಿವರ್ ಬಳಸಿ ಶಟರ್ ಮುರಿದು ಬ್ಯಾಂಕ್ ನ ಒಳಗೆ ನುಗ್ಗಿ ಜಾಲಾಡಿ ಕಳವಿಗೆ ಪ್ರಯತ್ನಿಸಿ ಸಾಧ್ಯವಾಗದೆ ವಾಪಾಸು ಹೋಗಿರುವ ಘಟನೆ ನಡೆದಿದೆ. ಬ್ಯಾಂಕ್ ಗೆ ಅಳವಡಿಸಿ ದ ಸಿ.ಸಿ.ಕ್ಯಾಮರಾ ವನ್ನು ತಿರುಗಿಸಿ ಬಳಿಕ ಒಳಗೆ ನುಗ್ಗಿದ್ದಾರೆ ಎನ್ನಲಾಗಿದೆ.
ವಿಟ್ಲ ಪೋಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ
ಮಾಡುವ ಮೊದಲೇ ಸಾರ್ವಜನಿಕ ರು ಬ್ಯಾಂಕ್ ನೊಳಗೆ ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯ