ವಿಧಾನಸಭೆ ಸ್ಪೀಕರ್ ಹುದ್ದೆಗೆ ದಿನಾಂಕ ಘೋಷಣೆ: ಆಗಸ್ಟ್ 14ರಂದು ನಡೆಯಲಿದೆ ನೂತನ ಸ್ಪೀಕರ್ ಆಯ್ಕೆ!
ಬೆಂಗಳೂರು (ಆಗಸ್ಟ್ 11): ಕರ್ನಾಟಕ ವಿಧಾನಸಭೆಯ ನೂತನ ಅಧ್ಯಕ್ಷರ (ಸ್ಪೀಕರ್) ಆಯ್ಕೆಗೆ ಮುಹೂರ್ತ ನಿಗದಿಯಾಗಿದ್ದು, ಆಗಸ್ಟ್ 14, ಶುಕ್ರವಾರದಂದು ಚುನಾವಣೆ ನಡೆಯಲಿದೆ. ಪ್ರಸ್ತುತ ವಿಧಾನಸಭೆಯ ಸ್ಪೀಕರ್ ಹಾಗೂ ಉಪ ಸ್ಪೀಕರ್ ಎರಡೂ ಹುದ್ದೆಗಳು ಖಾಲಿಯಿದ್ದವು. ಈ ಹಿನ್ನೆಲೆಯಲ್ಲಿ, ನೂತನ ಸ್ಪೀಕರ್ ಆಯ್ಕೆಯಾಗುವವರೆಗೆ ಕಲಾಪ ನಡೆಸಲು ರಾಜ್ಯಪಾಲ ತಾವರ್ ಚಂದ್…










