ವಿಶ್ವದ 9ನೇ ಅತ್ಯಂತ ಸುಂದರ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಾಲಿವುಡ್ ಬೆಡಗಿ
ಮುಂಬೈ: ಬಾಲಿವುಡ್‌ನ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ವಿಶ್ವದ 9ನೇ ಅತ್ಯಂತ ಸುಂದರ ಮಹಿಳೆ ಎಂದು ಮಾನ್ಯತೆ ಪಡೆದಿದ್ದಾರೆ. ಗೋಲ್ಡನ್ ರೇಷಿಯೋ ಆಫ್ ಬ್ಯೂಟಿ ಎಂಬ ವೈಜ್ಞಾನಿಕ ಮಾನದಂಡದ ಆಧಾರದ ಮೇಲೆ ಈ ಶ್ರೇಣಿಯನ್ನು ನಿರ್ಧರಿಸಲಾಗಿದೆ. ಗೋಲ್ಡನ್ ರೇಷಿಯೋ ಆಫ್ ಬ್ಯೂಟಿ ಪ್ರಾಚೀನ ಗ್ರೀಕ್ ತತ್ವಶಾಸ್ತ್ರವನ್ನು ಆಧರಿಸಿದ ವಿಧಾನವಾಗಿದೆ.…









