ವೀಲ್‌ಚೇರ್ ದಿನ 2025: ವಿಕಲ ಚೇತನರಿಗಾಗಿ ಪ್ರವೇಶಯೋಗ್ಯತೆ ಮತ್ತು ಒಕ್ಕೂಟದ ಯೋಜನೆಗಳು

ವೀಲ್‌ಚೇರ್ ದಿನ 2025: ವಿಕಲ ಚೇತನರಿಗಾಗಿ ಪ್ರವೇಶಯೋಗ್ಯತೆ ಮತ್ತು ಒಕ್ಕೂಟದ ಯೋಜನೆಗಳು

ನವದೆಹಲಿ, ಮಾರ್ಚ್ 1, 2025: ಅಂತರಾಷ್ಟ್ರೀಯ ವೀಲ್ ಚೇರ್ ದಿನ 2025 ಪ್ರಯುಕ್ತ, ವಿಕಲ ಚೇತನರ  ಸಬಲೀಕರಣ ಇಲಾಖೆ (DEPwD), ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುವ ವಿವಿಧ ರಾಷ್ಟ್ರೀಯ ಸಂಸ್ಥೆಗಳು ಮತ್ತು ಸಂಯುಕ್ತ ಪ್ರಾದೇಶಿಕ ಕೇಂದ್ರಗಳು (CRCs) ದೇಶದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿವೆ. ವಿಶೇಷ ಚೇತನರಿಗೆ ಪ್ರವೇಶಾತಿ, ಸ್ವಾಯತ್ತತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವೀಲ್ ಚೇರ್‌ಗಳ ಮಹತ್ವವನ್ನು ಒತ್ತಿ ಹೇಳುತ್ತವೆ ಮತ್ತು ಸಮಾಜದಲ್ಲಿ ಜಾಗೃತಿಯನ್ನು ಹೆಚ್ಚಿಸುತ್ತವೆ.

NILD, ಕೊಲ್ಕತ್ತಾದಲ್ಲಿ ಸೆಮಿನಾರ್ ಮತ್ತು ಕ್ರೀಡಾ ಕಾರ್ಯಕ್ರಮಗಳು

ಕೊಲ್ಕತ್ತಾದ NILD ಸಂಸ್ಥೆ ವೀಲ್ ಚೇರ್‍ ವಿತರಣೆಯೊಂದಿಗೆ ಸೆಮಿನಾರ್ ಮತ್ತು ವೀಲ್‌ಚೇರ್ ಬಳಕೆದಾರರಿಗೆ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿತು. ವೀಲ್‌-ಚೇರ್ ಬಳಕೆದಾರರಾದ ಶ್ರೀಮತಿ ಡಾಲಿ ಅವರನ್ನು ಅವರ ಧೈರ್ಯ ಮತ್ತು ಸಕಾರಾತ್ಮಕ ಮನೋಭಾವಕ್ಕಾಗಿ ಗೌರವಿಸಲಾಯಿತು.

NIEPID, ಸಿಕಂದರಾಬಾದ್‌ನಲ್ಲಿ ಸಹಾಯಕ ಸಾಧನಗಳ ಕುರಿತು ಚರ್ಚೆ

ಸಿಕಂದರಾಬಾದಿನ ಬೌದ್ಧಿಕ ವಿಕಲಚೇತನರ ಸಬಲೀಕರಣ ಸಂಸ್ಥೆ (NIEPID) ಮೊಬಿಲಿಟಿ ಇಂಡಿಯಾ, ಹೈದರಾಬಾದ್ ಸಹಯೋಗದಲ್ಲಿ ಸಹಾಯಕ ತಂತ್ರಜ್ಞಾನಗಳ ಕುರಿತು ಚರ್ಚಾ ಕಾರ್ಯಕ್ರಮ ಆಯೋಜಿಸಿತು. ತಜ್ಞರು ಮೊಬಿಲಿಟಿ ಸಾಧನಗಳ ಸುಧಾರಿತ ತಂತ್ರಜ್ಞಾನಗಳು ಮತ್ತು ವಿಕಲ ಚೇತನರಿಗೆ ವೀಲ್-ಚೇರ್‌ಗಳ ಮಹತ್ವವನ್ನು ವಿವರಿಸಿದರು.

SVNIRTAR, ಒಡಿಶಾದಲ್ಲಿ ಒಳಗೊಳ್ಳುವಿಕೆಯ ಕುರಿತು ಜಾಗೃತಿ ಕಾರ್ಯಕ್ರಮ

ಕಟಕ್, ಒಡಿಶಾದ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪುನರ್ವಸತಿ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (SVNIRTAR) ವೀಲ್-ಚೇರ್ ಬಳಕೆದಾರರು ಮತ್ತು ಅವರ ಪೋಷಕರಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮವು ಪ್ರವೇಶಾತಿ ಮತ್ತು ಒಳಗೊಳ್ಳುವಿಕೆಯ ಮಹತ್ವವನ್ನು ಒತ್ತಿ ಹೇಳುತ್ತಿತ್ತು.

CRC ಗೋರಖ್-ಪುರದಲ್ಲಿ ಜಾಗೃತಿ ಮತ್ತು ವೀಲ್-ಚೇರ್ ವಿತರಣಾ ಕಾರ್ಯಕ್ರಮ

ಸಂಯುಕ್ತ ಪ್ರಾದೇಶಿಕ ಕೇಂದ್ರ (CRC), ಗೋರಖ್ ಪುರದಲ್ಲಿ ಅಂಗವಿಕಲ ವ್ಯಕ್ತಿಗಳಿಗೆ ಪ್ರಯೋಜನಕಾರಿಯಾದ ಒಂದು ದಿನದ ಜಾಗೃತಿ ಮತ್ತು ವೀಲ್-ಚೇರ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವೀಲ್-ಚೇರ್‌ಗಳ ವಿತರಣೆಯಿಂದ ಅವರ ಚಲನೆ ಮತ್ತು ಸ್ವಾಯತ್ತತೆಯನ್ನು ಸುಧಾರಿಸಲಾಯಿತು.

CRC, ತ್ರಿಪುರಾದಲ್ಲಿ ವಿವಿಧ ಚಟುವಟಿಕೆಗಳು

CRC ತ್ರಿಪುರಾ ವೀಲ್-ಚೇರ್ ಬಳಕೆದಾರರ ಅವಶ್ಯಕತೆಗಳು, ಹಕ್ಕುಗಳು ಮತ್ತು ಪ್ರವೇಶಾತಿಯ ಕುರಿತು ವಿಶೇಷ ಸಭೆಗಳನ್ನು ಆಯೋಜಿಸಿತು. ಈ ಸಭೆಗಳನ್ನು ಜಾಗೃತಿಯನ್ನು ಹೆಚ್ಚಿಸಲು ಮತ್ತು ಅಂಗವಿಕಲರಲ್ಲಿ ಹುಮ್ಮಸ್ಸನ್ನು ತರಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು.

CRC, ದಾವಣಗೆರೆಯಲ್ಲಿ ವೀಲ್-ಚೇರ್ ತರಬೇತಿ ಮತ್ತು ಸಹಾಯಕ ಸಾಧನ ವಿತರಣಾ ಕಾರ್ಯಕ್ರಮ

CRC ದಾವಣಗೆರೆ ALIMCO ಜೊತೆ ಸಹಯೋಗದ ಮೂಲಕ 26 ಫಲಾನುಭವಿಗಳಿಗೆ ವೀಲ್-ಚೇರ್ ಕಾರ್ಯಾಚರಣೆ ತರಬೇತಿ ನೀಡಿತು ಮತ್ತು 90 ಸಹಾಯಕ ಸಾಧನಗಳನ್ನು ವಿತರಿಸಿತು. ಇದರಿಂದ ವಿಕಲ ಚೇತನರಿಗೆ ಆತ್ಮನಿರ್ಭರರಾಗುವುದಕ್ಕೆ ಸಾಧ್ಯವಾಯಿತು.

CRC, ನೆಲ್ಲೂರಿನಲ್ಲಿ ವೀಲ್-ಚೇರ್ ಸ್ಪರ್ಧೆ ಮತ್ತು ವಿತರಣೆ

CRC, ನೆಲ್ಲೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಇದರಲ್ಲಿಯೇ ಒಂದು ವಿಶೇಷ ಜಾಗೃತಿ ಅಭಿಯಾನವು ಅಂತರಾಷ್ಟ್ರೀಯ ವೀಲ್-ಚೇರ್ ದಿನದ ಮಹತ್ವವನ್ನು ಪ್ರತಿಪಾದಿಸಿತು. ಅಗತ್ಯವಿರುವವರಿಗೆ ವೀಲ್‌ಚೇರ್‌ಗಳನ್ನು ವಿತರಿಸಲಾಯಿತು, ಜೊತೆಗೆ  ವೀಲ್-ಚೇರ್ ರೇಸ್ ಸ್ಪರ್ಧೆಯನ್ನು ಆಯೋಜಿಸಲಾಯಿತು. ವಿಜೇತರನ್ನು ವಿಶೇಷ ಬಹುಮಾನಗಳೊಂದಿಗೆ ಗೌರವಿಸಲಾಯಿತು.

ಈ ಕಾರ್ಯಕ್ರಮಗಳು ವೀಲ್-ಚೇರ್ ಬಳಕೆದಾರರ ಅಗತ್ಯಗಳಿಗೆ ಪ್ರಾಮುಖ್ಯತೆಯನ್ನು ನೀಡಿದ್ದು, ಒಳಗೊಳ್ಳುವಿಕೆಯ ಮಹತ್ವವನ್ನು ತೋರಿಸಿತು. ಅಂತರಾಷ್ಟ್ರೀಯ ವೀಲ್-ಚೇರ್ ದಿನ 2025 ವಿಕಲ ಚೇತನರಿಗೆ ಪ್ರವೇಶಾತಿ, ಸ್ವಾಯತ್ತತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಮಹತ್ವದ ಅವಕಾಶವಾಯಿತು, ಇದರಿಂದಾಗಿ ಸಮಾಜವನ್ನು ಇನ್ನಷ್ಟು ಜಾಗೃತವಾಗಿಸುವುದಕ್ಕೆ ಸಾಧ್ಯವಾಯಿತು.

ಅಂತರಾಷ್ಟ್ರೀಯ