ಆಟಿ ಉತ್ಸವ ಅಲ್ಲ, ಅದು ನಮ್ಮ ಹಿರಿಯರ ಬದುಕಿನ ನೈಜ ಚಿತ್ರಣ-ಭವಾನಿ ಶಂಕರ ಆಡ್ತಲೆ

ಆಟಿ ಎಂದರೆ ಉತ್ಸವ ಅಲ್ಲ ಅದು ನಮ್ಮ ಹಿರಿಯರು ಬದುಕಿದ ಬದುಕಿನ ನೈಜ ಚಿತ್ರಣ ಎಂದು ಎ.ಓ.ಎಲ್.ಇ ಕಮಿಟಿ “ಬಿ” ಯ ಆಡಳಿತಾಧಿಕಾರಿ ಭವಾನಿ ಶಂಕರ್ ಅಡ್ತಲೆ ಹೇಳಿದರು. ಅವರು ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವರೆಡ್ ಕ್ರಾಸ್ ಘಟಕಗಳ ವತಿಯಿಂದ ನಡೆದ “ಆಟಿ ಅವಲೋಕನ” ಎಂಬ ವಿಶಿಷ್ಟ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.


ಇಂದು ಆಟಿ ತಿಂಗಳಲ್ಲಿ ಆಟಿ ಸಂಭ್ರಮ, “ಆಟಿ ಉತ್ಸವ” ಇತ್ಯಾದಿ ಆಚರಣೆಗಳನ್ನು ಅತ್ಯಂತ ವೈಭವದಿಂದ ಆಚರಿಸುವುದನ್ನು ಕಂಡಾಗ ನಮ್ಮ ಕಿರಿಯ ಪೀಳಿಗೆ ಆಟಿಯೆಂದರೆ ಬಹಳ ಸಮೃದ್ಧವಾದ ತಿಂಗಳಾಗಿತ್ತು ಎಂದು ತಿಳಿಯುವ ಅಪಾಯವಿದೆ ಆ ನಿಟ್ಟಿನಲ್ಲಿ ಕೆವಿಜಿ ಪಾಲಿಟೆಕ್ನಿಕ್ ಎನ್ಎಸ್ಎಸ್ ಘಟಕ ಹಮ್ಮಿಕೊಂಡ ವಿಶಿಷ್ಟ ಕಾರ್ಯಕ್ರಮ “ಆಟಿ ಅವಲೋಕನ” ವು ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.

ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದಿನ ಕಾಲದ ಆಟಿ ತಿಂಗಳ ಜನ ಜೀವನದ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕ ಅನಿಲ್ ಕುಮಾರ್ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು. ಸಮಾರಂಭದ ವೇದಿಕೆಯಲ್ಲಿ ಎನ್ನೆಸ್ಸೆಸ್ ಘಟಕ ನಾಯಕರಾದ ಪುನಿತ್ ಎಸ್.ರೈ, ಅಭಿಷೇಕ್, ಭೂಮಿಕ ಹಾಗೂ ಮೋಕ್ಷಿತಾ ಸುವರ್ಣ ಉಪಸ್ಥಿತರಿದ್ದರು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇನ್ನೋರ್ವ ಕಾರ್ಯಕ್ರಮಾಧಿಕಾರಿ ಸುನಿಲ್ ಕುಮಾರ್ ಎನ್.ಪಿ ವಂದಿಸಿದರು. ಸ್ವಯಂ ಸೇವಕಿ ದೀವಿತಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ವಿಶೇಷತೆಗಳು :
ಆಟಿಕಳೆಂಜ ಪ್ರದರ್ಶನ, ಅಟಿ ರಸಪ್ರಶ್ನೆ, ಗಿಡಮೂಲಿಕೆಗಳನ್ನು ಗುರುತಿಸುವ ಸ್ಪರ್ಧೆ, ಚೆನ್ನೆಮಣೆ ಆಟ, ರುಚಿಯ ಗುಟ್ಟು ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು.

