ಬೆಳ್ತಂಗಡಿಯ ಯುವಕ ಪಂಜದಲ್ಲಿ  ವಿದ್ಯುತ್ ಕಾಮಗಾರಿ ವೇಳೆ ಕಂಬದಲ್ಲೆ ಮೃತ್ಯು: ಪ್ರಕರಣ ದಾಖಲು

ಬೆಳ್ತಂಗಡಿಯ ಯುವಕ ಪಂಜದಲ್ಲಿ ವಿದ್ಯುತ್ ಕಾಮಗಾರಿ ವೇಳೆ ಕಂಬದಲ್ಲೆ ಮೃತ್ಯು: ಪ್ರಕರಣ ದಾಖಲು

.

 

ಕಡಬ: ಪಂಜ ಮೆಸ್ಕಾಂ ಶಾಖಾ ವ್ಯಾಪ್ತಿಯ ಅಲೆಕ್ಕಾಡಿ ಸಮೀಪದ ಪಿಜಾವು ಪಾರ್ಲ ಎಂಬಲ್ಲಿ ಜೂ.17ರಂದು ವಿದ್ಯುತ್ ಕಂಬದಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ಕಂಬದಲ್ಲೇ ಮೆಸ್ಕಾಂ ಗುತ್ತಿಗೆ ಕಾರ್ಮಿಕರೊಬ್ಬರು ಮೃತಪಟ್ಟ ಆಘಾತಕಾರಿ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಉರ್ಮಾಳ ಕೃಷ್ಣಪ್ಪ ಗೌಡರ ಮಗ ಪ್ರಕಾಶ್ (20ವ.)ಮೃತಪಟ್ಟವರು.

ಈ ಕುರಿತು ಮೃತ ಪ್ರಕಾಶ್ ಅವರ ಸಹೋದರ ಹಾಗೂ ಮೆಸ್ಕಾಂ ಗುತ್ತಿಗೆ ಕಾರ್ಮಿಕನೂ ಆಗಿರುವ ಸೀತಾರಾಮ ಗೌಡ ಅವರು ದೂರು ನೀಡಿದ್ದು, ಬೆಳ್ಳಾರೆ ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದಾರೆ. ಪ್ರಕಾಶ್ ಅವರ ಸಾವು ವಿದ್ಯುತ್ ಶಾಕ್ ನಿಂದ ಉಂಟಾಗಿದೆಯೇ? ಅಥಾವ ಬೇರೆ ಇನ್ನಾವುದೇ ಕಾರಣದಿಂದ ಸಂಭವಿಸಿರಬಹುದೇ ಎಂದು ಪೊಲೀಸ್ ತನಿಖೆಯ ಮೇಲೆ ತಿಳಿದು ಬರಬೇಕಿದೆ. ಬೆಳ್ಳಾರೆ ಪೊಲೀಸರು ಸಿಆರ್ ಪಿಸಿ ಕಲಂ 174(3)4 ಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನೂ ಘಟನೆಯ ಕುರಿತು ಪಂಜ ಶಾಖಾ ಜೆಇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ಕಾಮಗಾರಿ ನಡೆಯುತ್ತಿದ್ದ ಸಂದರ್ಭ ವಿದ್ಯುತ್ ಆಫ್ ಆಗಿತ್ತು. ಆದರೂ ವಿದ್ಯುತ್ ಶಾಕ್ ನಿಂದ ದುರ್ಘಟನೆ ಸಂಭವಿಸಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಸಹೋದರ ಸೀತಾರಾಮ್ ನೀಡಿದ ದೂರಿ ನಲ್ಲಿ ಏನಿದೆ ?ತಾನು, ಅಣ್ಣ ಪುರಂದರ ಹಾಗೂ ತಮ್ಮ ಪ್ರಕಾಶ ಕಳೆದ ಮೂರು ವರ್ಷಗಳಿಂದ ಗುತ್ತಿಗೆದಾರ ಅಭಿಲಾಶ್ ಅವರೊಂದಿಗೆ ಕೆಲಸ ಮಾಡಿಕೊಂಡಿದ್ದು ನಿನ್ನೆ ಬೆಳಿಗ್ಗೆ 11.45ರ ಸುಮಾರಿಗೆ ದುರ್ಘಟನೆ ನಡೆದಿದೆ. ನಾವು ಮೂವರು ಸಹೋದರರು ಅಲೆಕ್ಕಾಡಿ ಪಾರ್ಲ ಎಂಬಲ್ಲಿ ಇತರರೊಂದಿಗೆ 4 ವಿದ್ಯುತ್ ಕಂಬಗಳಲ್ಲಿ ಎಲ್ ವಾಹಕ ಬದಲಾವಣೆ ಕೆಲಸ ಮಾಡಿಕೊಂಡಿದ್ದೆವು. ಈ ಪೈಕಿ ಪ್ರಕಾಶ್ 3ನೇ ಕಂಬದಲ್ಲಿ ಕೆಲಸ ಮಾಡಿಕೊಂಡಿದ್ದು ಕಂಬದಿಂದ 2 ಡಬಲ್ ಎಲ್ ಟಿಸಿಂಗಲ್ ಫೇಸ್ ಲೈನ್ ಸುಮಾರು 25 ಮೀ. ರಸ್ತೆಯಿಂದ ಆ ಕಡೆ ಬದಿಯಿಂದ ಹೆಡ್ಟಿ ಲೈನ್ ಕೆಳಗಡೆ ಹಾದು ಹೋಗಿದ್ದು ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿರುವ ಸಮಯ ಪ್ರಕಾಶ್ ಏಕಾಏಕಿ ಕಿರುಚಾಡಿಕೊಂಡ ಶಬ್ದ ಕೇಳಿತು. ನೋಡಿದಾಗ ಆತ ಕಂಬದಲ್ಲಿ ಸಿಕ್ಕಿಕೊಂಡಿರುವ ಸ್ಥಿತಿಯಲ್ಲಿದ್ದು ತಾನು ಹಾಗೂ ಇತರರು ಏಣಿ ಸಹಾಯದಿಂದ ಆತನಿದ್ದ ಕಂಬ ಏರಿ ಕೆಲಕ್ಕಿಳಿಸಿ ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ.

ತಕ್ಷಣವೇ ಆ್ಯಂಬುಲೆನ್ಸ್ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಪ್ರಯೋಜನವಾಗಲಿಲ್ಲ. ಮೃತ ಪ್ರಕಾಶ್ ವಿದ್ಯುತ್ ಕಂಬದಲ್ಲಿ ವಾಹಕ ಬದಲಾವಣೆ ಮಾಡುತ್ತಿರುವ ಸಮಯ ವಿದ್ಯುತ್ ಪ್ರವಹಿಸಿ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವ ಸಾಧ್ಯತೆ ಇದ್ದು ಆತನ ಮರಣದಲ್ಲಿ ಸಂಶಯವಿದೆ ಎಂದು ಮೃತರ ಸಹೋದರ ಸೀತಾರಾಮ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ರಾಜ್ಯ