ಪಯಸ್ವಿನಿ ಯುವತಿ ಮಂಡಲ ಸುಳ್ಯ ಮತ್ತು ಯುವಜನ ಸಂಯುಕ್ತ ಮಂಡಳಿ ಆಶ್ರಯದಲ್ಲಿ ಕೋಟಕ್ ಮಹೀಂದ್ರಾ ಲೈಫ್ ಇನ್ಸೂರೆನ್ಸ್ ಮತ್ತು ಮೇಡಿಕ್ವೆಸ್ಟ್ ಹೆಲ್ತ್ ಕೇರ್ ಮಂಗಳೂರು ಆಯೋಜಿಸುವ ಉಚಿತ ರಕ್ತ ತಪಾಸಣಾ ಶಿಬಿರ ಜೂನ್ 19 ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರೊ ಡಾ ಹರ್ಷವರ್ಧನ್ ವಹಿಸಲಿದ್ದು. ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಎಂ, ಪಯಸ್ವಿನಿ ಯುವತಿ ಮಂಡಲದ ಅಧ್ಯಕ್ಷೆ ನಮಿತ ಬಿ ವಿ ಮತ್ತು ಕೋಟಕ್ ಲೈಪ್ ನ ಸಹಾಯಕ ನಿರ್ದೇಶಕ ರಾಹುಲ್ ಆಚಾರ್ಯ ಮುಂತಾದವರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಈ ಉಚಿತ ರಕ್ತ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಯೋಜಕರು ನ್ಯೂಸ್ ರೂಮ್ ಪಸ್ಟ್ ಗೆ ತಿಳಿಸಿದ್ದಾರೆ.


