ಆಲೆಟ್ಟಿ: ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಕೂಟೇಲು ಎಂಬಲ್ಲಿ ರಾತ್ರಿ ಸುರಿದ ವಿಪರೀತ ಮಳೆಯಿಂದಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ತರವಾಡು ಮನೆಯ ಹಿಂಬದಿಯ ಬರೆ ಕುಸಿತಗೊಂಡು ಹಾನಿ ಸಂಭವಿಸಿದೆ.ಬರೆ ಕುಸಿತದ ಪರಿಣಾಮವಾಗಿ ಮನೆಯ ‘ದೈವ ಚಾವಡಿ’ಯ ಮೇಲ್ಭಾಗ ಹಾಗೂ ಗೋಡೆಗೆ ಹಾನಿಯುಂಟಾಗಿದ್ದು, ಅಲ್ಲಿ ಇರಿಸಲಾಗಿದ್ದ ನೀರಿನ ಟ್ಯಾಂಕ್‌ಗೂ ಹಾನಿಯಾಗಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.







