ಸುಳ್ಯ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ “ಕಲಾಕಾರ್ 2025” ಜೂನ್ 3ರಂದು ಅಮರಶ್ರೀ ಭಾಗ್‌ನ ಶ್ರೀ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಕೆ.ಎನ್. ಸುಬ್ರಮಣ್ಯ, ಪ್ರಾಂಶುಪಾಲ, ಆರ್.ವಿ. ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು ಇವರು ವಹಿಸಿದ್ದರು. ಇವರು ವಿದ್ಯಾರ್ಥಿಗಳಿಗೆ ಇಂದಿನ ನವಯುಗದಲ್ಲಿ ತಾಂತ್ರಿಕತೆಗೆ ಹೆಚ್ಚಿನ ಮಹತ್ವವಿದೆ, ಅಲ್ಲದೆ ದಿನದಿಂದ ದಿನಕ್ಕೆ ತಾಂತ್ರಿಕತೆಯಲ್ಲಿ ಬದಲಾವಣೆ ಕಾಣುತ್ತಿರುವುದರಿಂದ ಯುವ ಪೀಳಿಗೆ ಹೊಸ ತಂತ್ರಜ್ಞಾನಗಳ ಕಲಿಯುವಿಕೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಹೇಳಿದರು.


ಡಾ. ಶಿವಕುಮಾರ್ ಹೆಚ್.ಆರ್., ನಿವೃತ್ತ ರೀಜನಲ್ ಡೈರೆಕ್ಟರ್, ವಿ.ಟಿ.ಯು. ಬೆಳಗಾವಿ ಹಾಗೂ ನಿವೃತ್ತ ಉಪಪ್ರಾಂಶುಪಾಲ ಮತ್ತು ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರು, ಕೆ.ವಿ.ಜಿ.ಸಿ.ಇ. ಗೌರವ ಅತಿಥಿ ನೆಲೆಯಲ್ಲಿ ಮಾತನಾಡಿದ ಇವರು ಕೆ.ವಿ.ಜಿ.ಸಿ.ಇ.ಯ ಪ್ರಯಾಣದಲ್ಲಿ ಸಹಕರಿಸಿದ ಕಾಲೇಜಿನ ಸ್ಥಾಪಕಧ್ಯಕ್ಷರಾದ ದಿ. ಕುರುಂಜಿ ವೆಂಕಟ್ರಮಣ ಗೌಡರನ್ನು ಸ್ಮರಿಸಿಕೊಂಡು ಅವರ ಮಾತಿನಂತೆ ಜೀವನದಲ್ಲಿ ಸಫಲತೆಯನ್ನು ಪಡೆದಿದ್ದೇನೆ ಎಂದು ನುಡಿದು ಭಾವುಕರಾದರು. ಡಾ. ರೇಣುಕಾಪ್ರಸಾದ್ ಕೆ.ವಿ, ಚೇರ್‌ಮೆನ್ ಕಮಿಟಿ ‘ಬಿ’ ಎ.ಒ.ಎಲ್.ಇ.(ರಿ), ಡಾ. ಜ್ಯೋತಿ ಆರ್. ಪ್ರಸಾದ್, ಸೆಕ್ರೆಟರಿ, ಕಮಿಟಿ ‘ಬಿ’ ಎ.ಒ.ಎಲ್.ಇ.(ರಿ), ಸುಳ್ಯ, ಡಾ. ಉಜ್ವಲ್ ಯು.ಜೆ., ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರನ್ನು ಸ್ಮರಿಸಿಕೊಂಡರು.
ಇದೇ ಸಂದರ್ಭದಲ್ಲಿ ಡಾ. ರೇಣುಕಾಪ್ರಸಾದ್ ಕೆ.ವಿ, ಚೇರ್‌ಮೆನ್ ಕಮಿಟಿ ‘ಬಿ’ ಎ.ಒ.ಎಲ್.ಇ.(ರಿ), ಸುಳ್ಯ ಇವರು ಡಾ. ಶಿವಕುಮಾರ್ ಹೆಚ್. ಆರ್. ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಅಭಿನಂದಿಸಿದರು ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾರಾರ್ಪಣೆ ಮಾಡುವುದರ ಮೂಲಕ ಅಭಿನಂದಿಸಿದರು.
ವಿ.ಟಿ.ಯು. ಬೆಳಗಾವಿ ಇದರ ಎಕ್ಸೆಕ್ಯುಟಿವ್ ಕೌನ್ಸಿಲ್ ಸದಸ್ಯರು, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ. ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯಗಳೊಂದಿಗೆ ಸಾಂಸ್ಕೃತಿಕ ಚಟುವಟಿಕೆ, ಆಟೋಟ ಸ್ಪರ್ಧೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ, ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆ ಮತ್ತು ಕೌಶಲ್ಯ ಎಂಬಿತ್ಯಾದಿ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗಲಿದೆ ಎಂದು ಕಲಾಕಾರ್ 2025ಕ್ಕೆ ಶುಭಕೋರಿದರು.
ಡಾ. ರೇಣುಕಾಪ್ರಸಾದ್ ಕೆ.ವಿ, ಚೇರ್‌ಮೆನ್ ಕಮಿಟಿ ‘ಬಿ’ ಎ.ಒ.ಎಲ್.ಇ.(ರಿ), ಸುಳ್ಯ ಇವರು ಅಧ್ಯಕ್ಶ ಸ್ಥಾನ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಅವರು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಈ ವರ್ಷದ ಕಾಲೇಜಿನ ಸಂಶೋಧನಾ ಕೇಂದ್ರದಲ್ಲಿ ಪಿ.ಹೆಚ್.ಡಿ. ಪದವಿ ಪಡೆದ ಡಾ. ಬಾಲಪ್ರದೀಪ್ ಕೆ.ಎನ್. ಮತ್ತು ಡಾ. ದಿವ್ಯ ಎ.ಕೆ. ಅವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು. ಇದರ ಜೊತೆಗೆ ಎಂ.ಟೆಕ್. ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದಲ್ಲಿ 2ನೇ ರ‍್ಯಾಂಕ್ ಪಡೆದ ಫರಾನ ಐ.ಎಂ., 3ನೇ ರ‍್ಯಾಂಕ್ ಪಡೆದ ಲಿಖಿತ ಎ.ಬಿ. ಮತ್ತು ಎಂ.ಟೆಕ್. ಕನ್‌ಸ್ಟ್ರಕ್ಷನ್ ಟೆಕ್ನಾಲಜಿ (ಸಿವಿಲ್ ಇಂಜಿನಿಯರಿಂಗ್) ವಿಭಾಗದಲ್ಲಿ 4ನೇ ರ‍್ಯಾಂಕ್ ಪಡೆದ ಶ್ರೀದೇವಿ ಎಂ.ಎನ್. ಹಾಗೂ ಅಥ್ಲೆಟಿಕ್ಸ್ನಲ್ಲಿ ಸಾಧನೆಗೈದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಟಿಷನ್ ಮಾದಪ್ಪ, ರೇಶ್ಮಾ ಡಿ., ಮಂಜುನಾಥ್ ಕೆ., ವಿಘ್ನೇಶ್ ಪಿ. ಹಾಗೂ ರಕ್ಷಿತಾ ಪಿ. ಅವರನ್ನು ಸನ್ಮಾನಿಸಲಾಯಿತು.
ವಿ.ಟಿ.ಯು. ಬೆಳಗಾವಿ ಇದರ ಕಾರ್ಯಕಾರಿ ಮಂಡಳಿ ಹಾಗೂ ವಿವಿಧ ಸಮಿತಿಗಳಿಗೆ ನೇಮಕಗೊಂಡು ಪ್ರಸಕ್ತ ಸಾಲಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಲೇಜಿನ ಪ್ರಾಧ್ಯಾಪಕರುಗಳಾದ ಡೀನ್-ಅಕಾಡೆಮಿಕ್ ಡಾ. ಪ್ರಜ್ಞಾ ಎಂ.ಆರ್., ಓಂಅ ಕೋಆರ್ಡಿನೇಟರ್ ಡಾ. ಲೇಖ ಬಿ.ಎಂ. ಮತ್ತು ಡಾ. ಕುಸುಮಾಧರ ಎಸ್., ವಿಭಾಗ ಮುಖ್ಯಸ್ಥರು, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಇವರಿಗೆ ಸನ್ಮಾನಿಸಲಾಯಿತು.
2025ನೇ ಸಾಲಿನ ಪದವಿ ಪೂರ್ಣಗೊಳಿಸಿದ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿಗಳಿಗೆ ಕೊಡಮಾಡುವ ಪ್ರಶಸ್ತಿಯನ್ನು ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದಿಂದ ಶಾಶ್ವತ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಿಂದ ಆಲ್ಫಿಯಾ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮೂಲಕ ಚರಣ್ ಬಿ.ಎನ್, ಸಿವಿಲ್ ಇಂಜಿನಿಯರಿಂಗ್ ವಿಭಾಗದಿಂದ ಪ್ರಿನ್ಸ್ ಎಂ.ಎಕ್ಸ್. ಹಾಗೂ ಎಂ.ಬಿ.ಎ. ವಿಭಾಗದಿಂದ ಗಾಯತ್ರಿ ನಂಬಿಯಾರ್ ಅವರು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ, ಶೈಕ್ಷಣಿಕ ಚಟುವಟಿಕೆ ಹಾಗೂ ಪ್ರಾಜೆಕ್ಟ್ ಎಕ್ಸ್ಪೋದಲ್ಲಿ ಪ್ರತಿಭಾಶಾಲಿಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು. ಪ್ರಾರ್ಥನೆಯನ್ನು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಕೃಷ್ಣರಾಜ್ ಮತ್ತು ತಂಡ ನಡೆಸಿಕೊಟ್ಟರು, ಶ್ಯಾವ್ಯ ಆರ್. ರೈ ಸ್ವಾಗತಿಸಿ, ನಿಶ್ಮಿತಾ ವಂದಿಸಿದರು. ಈ ಕಾರ್ಯಕ್ರಮವನ್ನು ವಾಗ್ದೇವಿ ಹಾಗೂ ಲಿಖಿತ್ ಪಿ.ಪಿ. ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.