
ಮಡಿಕೇರಿ ಜ.28 : ಟಿಂಬರ್ ಸಾಗಾಟದ ಸಂದರ್ಭ
ಮರದ ದಿಮ್ಮಿಯೊಂದು ಲಾರಿಯಿಂದ ಜಾರಿ ಪಿಕ್ಅಪ್ ಜೀಪಿನ ಗಾಜು ಸೀಳಿ ಒಳಹೊಕ್ಕ ಘಟನೆ ಸಂಪಾಜೆ ರಸ್ತೆಯ ಜೋಡುಪಾಲ ಸಮೀಪ ನಡೆದಿದೆ. ರಾತ್ರಿ 14 ಚಕ್ರದ ಲಾರಿಯೊಂದರಲ್ಲಿ ಭಾರೀ ಗಾತ್ರದ ಮರದ ದಿಮ್ಮಿಗಳನ್ನು ಮಂಗಳೂರು ಕಡೆಗೆ ಸಾಗಿಸಲಾಗುತ್ತಿತ್ತು.
ಜೋಡುಪಾಲ ಸಮೀಪ ಆಗಮಿಸುತ್ತಿದ್ದಂತೆ
ಮರದ ದಿಮ್ಮಿಗಳಿಗೆ ಬೆಸೆಯಲಾಗಿದ್ದ ಹಗ್ಗ
ತುಂಡರಿಸಲ್ಪಟ್ಟ ಪರಿಣಾಮ ದಿಮ್ಮಿಗಳು ರಸ್ತೆಗೆ
ಉರುಳಿ ಬಿದ್ದಿವೆ. ಇದೇ ವೇಳೆ ಜೋಡುಪಾಲದಿಂದ ಮದೆನಾಡು ಕಡೆಗೆ ಬರುತ್ತಿದ್ದ ಪಿಕ್ಅಪ್ ವಾಹನಕ್ಕೆ ಮರದ ದಿಮ್ಮಿಯೊಂದು ಅಪ್ಪಳಿಸಿದೆ. ದಿಮ್ಮಿ ಗಾಜು
ಸೀಳಿ ಒಳಹೊಕ್ಕರೂ ಚಾಲಕ ಪವಾಡ ಸದೃಶ
ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಪಿಕ್ಅಪ್ ವಾಹನ ಜಖಂಗೊಂಡಿದ್ದು, ಕೆಲ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


