
ನವದೆಹಲಿ: ಅಂತಿಮ ಕ್ಷಣದಲ್ಲಿ ಗಣರಾಜ್ಯೋತ್ಸವ
ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತ
ಕರ್ನಾಟಕದ ಸ್ತಬ್ದ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನಾರೀ ಶಕ್ತಿಯ ವಿಷಯ ಆಧರಿಸಿ ಈ ಸ್ತಬ್ದ ಚಿತ್ರ
ರಚಿಸಲಾಗಿದೆ.ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಹಾಲಕ್ಕಿ ಮತ್ತು ಸಾಲು ಮರದ ತಿಮ್ಮಕ್ಕ ಅವರ ಸಾಧನೆಯನ್ನು ಸ್ತಬ್ಧ ಚಿತ್ರ ಅನಾವರಣಗೊಳಿಸಿದೆ.
ರಾಜ್ಯದ ಸ್ತಬ್ಧ ಚಿತ್ರಕ್ಕೆ ಅನುಮತಿ ನಿರಾಕರಿಸಿದ್ದು ತೀವ್ರ
ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಕೇಂದ್ರ ಸರ್ಕಾರ ಇದರಲ್ಲಿ ಮಧ್ಯ ಪ್ರವೇಶಿಸಿ ಅನುಮತಿ ನೀಡಿತ್ತು. ಕಳೆದ 13 ವರ್ಷಗಳಿಂದ ನಿರಂತರವಾಗಿ ಕರ್ನಾಟಕದ ಸ್ತಬ್ಧ ಚಿತ್ರಗಳು ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಿಂಚುತ್ತಿವೆ

