ಪುತ್ತೂರು ಯುವತಿಯ ಇರಿದು ಕೊಲೆ ಪ್ರಕರಣ: ಆರೋಪಿ ಸುಳ್ಯ ಮೂಲದವ…? ಕನಕಮಜಲು ಯುವಕನ ಮೇಲೆ ಮನೆಯವರ ಶಂಕೆ. ಪ್ರಕರಣ ದಾಖಲು..

ಪುತ್ತೂರು ಯುವತಿಯ ಇರಿದು ಕೊಲೆ ಪ್ರಕರಣ: ಆರೋಪಿ ಸುಳ್ಯ ಮೂಲದವ…? ಕನಕಮಜಲು ಯುವಕನ ಮೇಲೆ ಮನೆಯವರ ಶಂಕೆ. ಪ್ರಕರಣ ದಾಖಲು..

ಪುತ್ತೂರು: ಮುಂಡೂರು ಕಂಪದ ದಿ.ಗುರುವ ಎಂಬವರ ಪುತ್ರಿ ಜಯಶ್ರೀ ಎಂಬಾಕೆಯನ್ನು ಜ.17ರಂದು ಚೂರಿಯಿಂದ ಕೊಲೆಮಾಡಿರುವುದು ಸುಳ್ಯ ತಾಲೂಕಿನ ಕನಕಮಜಲಿನ ಉಮೇಶ ಎಂಬಾತನ ಕೃತ್ಯ ಎಂದು ಶಂಕೆ ವ್ಯಕ್ತವಾಗಿದ್ದು ಸಾವಿಗೀಡಾದ ಯುವತಿ ಮನೆಯವರು ಉಮೇಶ್ ಕನಕಮಜಲು ವಿರುದ್ದ ಸಂಶಯ ವ್ಯಕ್ತ ಪಡಿಸಿ ದೂರು ನೀಡಿದ್ದು ಪೊಲೀಸರು ಮಾಹಿತಿ ಸಂಗ್ರಹಿಸಿದ್ದು ತನಿಖೆ ಮುಂದುವರಿದಿದೆ.

ದೂರಿನಲ್ಲಿ ಏನಿದೆ..?

ದಿನಾಂಕ:- 17.01.2023ರಂದು ಬೆಳಿಗ್ಗೆ ಸುಮಾರು 11.00 ಗಂಟೆಗೆ ಗಿರಿಜಾರವರು ತನ್ನ ತೋಟಕ್ಕೆ ಹೋಗಿದ್ದಾಗ. ಸದ್ರಿಯವರ ಮಗಳಾದ ಜಯಶ್ರೀಯು ಮನೆಯಲ್ಲಿ ಇದ್ದವಳು ಬೆಳಿಗ್ಗೆ ಸಮಯ ಸುಮಾರು 11.30 ಗಂಟೆಯ ವೇಳೆಗೆ ಅಮ್ಮಾ ಎಂದು ಕೂಗಿಕೊಂಡು ಗಿರಿಜಾರವರ ಬಳಿಗೆ ಓಡಿ ಬಂದಿರುತ್ತಾಳೆ. ಆಗ ಅವಳ ಹೊಟ್ಟೆಯಲ್ಲಿ ಗಾಯವಾಗಿ ರಕ್ತ ಸ್ರಾವವಾಗುತ್ತಿರುವುದು ಕಂಡು ಬಂದಿದ್ದು, ಗಿರಿಜಾರವರು ಆಟೋ ರಿಕ್ಷಾದಲ್ಲಿ ಜಯಶ್ರೀಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಮಧ್ಯಾಹ್ನ ಸುಮಾರು 12.15 ಗಂಟೆಗೆ ಪರೀಕ್ಷಿಸಿ, ಜಯಶ್ರೀಯು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಸದ್ರಿ ಜಯಶ್ರೀಯನ್ನು ಕನಕಮಜಲಿನ ಉಮೇಶ ಎಂಬವನು ಕೆಲವು ಸಮಯದಿಂದ ಪ್ರೀತಿಸುತ್ತಿದ್ದು, ಆತನು ಆಗ್ಗಾಗ್ಗೆ ಗಿರಿಜಾರವರ ಮನೆಗೂ ಬರುತ್ತಿದ್ದನು. ಆದರೆ ಇತ್ತೀಚೆಗೆ ಅವನ ಗುಣ ನಡತೆ ಜಯಶ್ರೀಗೆ ಇಷ್ಟವಾಗದ ಕಾರಣ 2022ನೇ ನವೆಂಬರ್ ವೇಳೆಗೆ ಜಯಶ್ರೀಯು ಉಮೇಶನನ್ನು ದೂರ ಮಾಡಿರುತ್ತಾಳೆ. ಈ ವಿಷಯದಲ್ಲಿ ಸದ್ರಿ ಉಮೇಶನು ಅಸಮಾಧಾನದಿಂದ ಇರುತ್ತಾನೆ. ಸದ್ರಿ ಜಯಶ್ರೀಯು ಈ ದಿನ ದಿನಾಂಕ 17.01.2023 ರಂದು ಬೆಳಿಗ್ಗೆ ಸುಮಾರು 11.30 ಗಂಟೆಗೆ ಫಿರ್ಯಾದುದಾರರ ಮನೆಯಲ್ಲಿದ್ದಾಗ ಯಾರೋ ಅಪರಿಚಿತರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮನೆಯೊಳಗಿದ್ದ ಜಯಶ್ರೀಯನ್ನು ಯಾವುದೋ ಆಯುಧದಿಂದ ತಿವಿದು ಕೊಲೆ ಮಾಡಿದ್ದು, ಈ ಕೃತ್ಯವನ್ನು ಸದ್ರಿ ಉಮೇಶನೇ ಮಾಡಿರುವ ಸಾಧ್ಯತೆ ಇರುವುದಾಗಿ ಸಂಶಯ ಇರುತ್ತದೆ.

ರಾಜ್ಯ