ಸೂತ್ರಬೆಟ್ಟು ಮನೆಯಿಂದ ಕಳ್ಳತನ ಪ್ರಕರಣ – ಇಬ್ಬರು ಕಳ್ಳರ ಬಂಧನ.

ಸೂತ್ರಬೆಟ್ಟು ಮನೆಯಿಂದ ಕಳ್ಳತನ ಪ್ರಕರಣ – ಇಬ್ಬರು ಕಳ್ಳರ ಬಂಧನ.


ಪುತ್ತೂರು:ಪುತ್ತೂರು ಕಸಬಾ ಗ್ರಾಮದ ಬಾಡಿಗೆ ಮನೆಯೊಂದರಿಂದ ಸೂತ್ರಬೆಟ್ಟುವಿನಲ್ಲಿರುವ
ನಗದು ಹಾಗೂ ಸೊತ್ತು ಕಳವು ಪ್ರಕರಣಕ್ಕೆ ಸಂಬಂಧಿಸಿ
ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.ಸವಣೂರು ಚಾಪಳ್ಳದ ಶಮೀರ್ ಮತ್ತು ಕೂರ್ನಡ್ಕದ ಮಹಮ್ಮದ್ ಮುಸ್ತಾಫ ಬಂಧಿತ ಆರೋಪಿಗಳಾಗಿದ್ದಾರೆ.
ಇವರು ಜ.7ರಂದು ಹಾಡಹಗಲೇ ಸೂತ್ರಬೆಟ್ಟುವಿನಲ್ಲಿ
ಬಟ್ಟೆ ವ್ಯಾಪಾರಿ ಗೋಪಿನಾಥ್ ಎಂಬವರ ಬಾಡಿಗೆ
ಮನೆಯೊಳಗೆ ನುಗ್ಗಿ ರೂ.18 ಸಾವಿರ ನಗದು, ಟಿವಿ,
ಯುಪಿಎಸ್ ಬ್ಯಾಟರಿ, ಇಸ್ತ್ರಿ ಪೆಟ್ಟಿಗೆ, 5 ಮೊಬೈಲ್‌ಗಳು,
ಚಾರ್ಜರ್ ಲೈಟ್, ಬ್ಲೂಟೂತ್ ಸ್ಪೀಕರ್, ಶರ್ಟ್, ಜೀನ್ಸ್
ಪ್ಯಾಂಟ್, ವಾಚ್ ಕಳವು ಮಾಡಿದ್ದರು. ಈ ಬಗ್ಗೆ
ಗೋಪಿನಾಥ್ ಅವರ ಸಹೋದರ ವಿವೇಕಾನಂದ ಯಾನೆ ಗೋಪಿನಾಥ್ ಅವರ ಸಹೋದರ ವಿವೇಕಾನಂದ ಯಾನೆ ಸತ್ಯನಾರಾಯಣ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ತನಿಖೆ ಕೈಗೆತ್ತಿಕೊಂಡ ಕೈಗೆತ್ತಿಕೊಂಡ ಪೊಲೀಸರು
ಜ.10ರಂದು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಕಳವು ನಡೆದ ಅನುಮಾನಾಸ್ಪದವಾಗಿ ದಿನವೇ
ತಿರುಗಾಡುತ್ತಿದ್ದ ವ್ಯಕ್ತಿಗಳಿಬ್ಬರ ಮಾಹಿತಿಯನ್ನು ಸ್ಥಳೀಯರು ಪೊಲೀಸರಿಗೆ ನೀಡಿದ್ದರು. ಅದೇ ಜಾಡು ಹಿಡಿದ ಪೊಲೀಸರು ಕಳ್ಳರನ್ನುಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯ