
ಹಿಂದೂ ಬಾಲಕಿಯೊಂದಿಗೆ ಸುಬ್ರಹ್ಮಣ್ಯದಲ್ಲಿ ಇದ್ದ ಕಲ್ಲುಗುಂಡಿಯ ಆಫಿದ್ ಎನ್ನುವ ಮುಸ್ಲಿಂ ಯುವಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ರಾಧಾಕೃಷ್ಣ (45), ವಿಶ್ವಾಸ್ ಎನ್. (19) ಎಂದು ಗುರುತಿಸಲಾಗಿದೆ.
ಆಫಿದ್ ಎನ್ನುವ ಕಲ್ಲುಗುಂಡಿಯ ಯುವಕ ಇನ್ಸ್ಟಾಗ್ರಾಂ ಮೂಲಕ ಪರಿಚಿತವಾದ ಹಿಂದೂ ಅಪ್ರಾಪ್ತ ಬಾಲಕಿಯನ್ನು ಸುಭ್ರಹ್ಮಣ್ಯ ಬಳಿಗೆ ಕರೆಸಿಕೊಂಡಿದ್ದ, ಇವರಿಬ್ಬರೂ ಜೊತೆಯಾಗಿ ಇರುವುದನ್ನು ನೋಡಿದ ಸ್ಥಳೀಯರು ಎನ್ನುವ ರಾಧಾಕೃಷ್ಣ ಮತ್ತು ವಿಶ್ವಾಸ್ ಆಫಿದ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಆಫಿದ್ ಆರೋಪಿಸಿ ದೂರು ನೀಡಿದ್ದ ಈ ಹಿನ್ನಲೆಯಲ್ಲಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂದಿಸಲಾಗಿದೆ ಎಂದು ತಿಳಿದು ಬಂದಿದೆ. ಆಪೀಧ್ ವಿರುದ್ದ ಬಾಲಕಿಯ ತಂದೆ ಮಗಳ ಮಾನ ಭಂಗದ ದೂರು ನೀಡಿದ್ದು, ಆಫಿದ್ ವಿರುದ್ದವೂ ಪ್ರಕರಣ ದಾಖಲಾಗಿದೆ, ಆಪಿದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.