ಕಾರ್ಕಳದಲ್ಲಿ ಶಾಲಾ ಪ್ರವಾಸದ ಬಸ್ ಪಲ್ಟಿ: ಹಲವರಿಗೆ ಗಾಯ.

ಕಾರ್ಕಳದಲ್ಲಿ ಶಾಲಾ ಪ್ರವಾಸದ ಬಸ್ ಪಲ್ಟಿ: ಹಲವರಿಗೆ ಗಾಯ.


ಕಾರ್ಕಳ ತಾಲೂಕಿನ ನಲ್ಲೂರಿನ ರಸ್ತೆ ತಿರುವಿನಲ್ಲಿ ಶಾಲಾ ಪ್ರವಾಸದ ಬಸ್‌ ಒಂದು ಉರುಳಿಬಿದ್ದು ಮೂವರು ಶಿಕ್ಷಕಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಘಟನೆಯಲ್ಲಿ ಒಟ್ಟು 15 ಜನಕ್ಕೆ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಬಸವೇಶ್ವರ ಪ್ರೌಢಶಾಲೆಯ ವಾರ್ಷಿಕ ಪ್ರವಾಸದ ಬಸ್‌ ಇದಾಗಿದೆ. ಉಡುಪಿಯಿಂದ ಕಾರ್ಕಳದ ಕಡೆಗೆ ಸಾಗುತ್ತಿದ್ದ ಬಸ್‌ ನಲ್ಲೂರು ತಿರುವಿನಲ್ಲಿ ಒಮ್ಮೆಗೇ ನಿಯಂತ್ರಣ ತಪ್ಪಿ ಉರುಳಿದ್ದು, ಒಂದು ಭಾಗಕ್ಕೆ ಸಂಪೂರ್ಣ ಪಲ್ಟಿಯಾಗಿದೆ. ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಇಲ್ಲ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ರಾಜ್ಯ