
ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹಾಗು ಇತರ ಇಬ್ಬರು ಸದಸ್ಯರ ರಾಜಿನಾಮೆ ಅಂಗೀಕಾರ ಆಗಿದೆ ಎಂದು ತಿಳಿದು ಬಂದಿದೆ. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ಶೌವಾದ್ ಗೂನಡ್ಕ ಹಾಗು ವಿಮಲಾ ಪ್ರಸಾದ್ ಅವರು ನ.25 ರಂದು ನೀಡಿದ್ದ ರಾಜಿನಾಮೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ಅಂಗೀಕಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರತಿಕ್ರಿಯೆ
ನೀಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ‘ 3 ಗ್ರಾ.ಪಂ.ಸದಸ್ಯರ ರಾಜಿನಾಮೆ ಅಂಗೀಕಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 15 ದಿನಗಳ ಒಳಗೆ ರಾಜಿನಾಮೆಯನ್ನು ಹಿಂಪಡೆಯದಿದ್ದರೆ ಕಾನೂನು ಪ್ರಕಾರ ಅಂಗೀಕಾರವಾಗುತ್ತದೆ. ಸದಸ್ಯರು ನನ್ನಲ್ಲಿ ನೇರವಾಗಿ ರಾಜಿನಾಮೆ ನೀಡಿದ್ದರು. ಆದರೆ ರಾಜಿನಾಮೆಯನ್ನು ಅವರು ಹಿಂಪಡೆದಿಲ್ಲ. ಆದುದರಿಂದ 15 ದಿನಗಳು ಪೂರ್ತಿಯಾದ ಹಿನ್ನಲೆಯಲ್ಲಿ ರಾಜಿನಾಮೆ ಅಂಗೀಕಾರ ಮಾಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಪುತ್ತೂರು ಸಹಾಯಕ ಕಮೀಷನರ್ ಹಾಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಅವಗಾಹನೆಗೆ ತರಲಾಗಿದೆ ಎಂದು ಜಿ.ಕೆ.ಹಮೀದ್ ತಿಳಿಸಿದ್ದಾರೆ. ಸೋಮಶೇಖರ ಕೊಯಿಂಗಾಜೆ ಅವರು ನೇರವಾಗಿ ನನ್ನಲ್ಲಿ ರಾಜಿನಾಮೆಯನ್ನು ನೀಡಿಲ್ಲ. ಬೇರೆಯವರ ಮೂಲಕ ಸಲ್ಲಿಸಿದ್ದರು ಎಂದು ಹಮೀದ್ ಹೇಳಿದ್ದಾರೆ. ಸಂಪಾಜೆ ವಲಯ ಕಾಂಗ್ರೆಸ್‌ನಲ್ಲಿ ಉಂಟಾದ ಗೊಂದಲ ಮತ್ತು ಅಸಮಾಧಾನದ ಹಿನ್ನಲೆಯಲ್ಲಿ ಸೋಮಶೇಖರ ಕೊಯಿಂಗಾಜೆ ಮತ್ತು ಇತರ 3 ಮಂದಿ ಸದಸ್ಯರು ರಾಜಿನಾಮೆ ಸಲ್ಲಿಸಿದ್ದರು. ಬಳಿಕ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಸದಸ್ಯರ ರಾಜಿನಾಮೆ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿತ್ತು. ಈ ಎಲ್ಲಾ ಬೆಳವಣಿಗೆಯಿಂದ ಸಂಪಾಜೆ ವಲಯ ಕಾಂಗ್ರೇಸ್ ಅದ್ಯಕ್ಷರ ರಾಜಿನಾಮೆಗೆ ಸ್ಪಂದಿಸಿ ರಾಜೀನಾಮೆ ನೀಡಿ ಸಹಕಾರದ ಪ್ರದರ್ಶನ ಮಾಡಿದ್ದ ಮೂವರು ಸದಸ್ಯರ ರಾಜಿನಾಮೆ ಅಂಗೀಕಾರ ಆಗಿರುವುದು ಒಂದು ಹಂತದಲ್ಲಿ ನಂಬಿದವರು ಕೈ ಕೊಟ್ಟಾಂತಾಗಿದೆ, ಅಂತು ಕಾಂಗ್ರೇಸ್ ಭದ್ರಕೋಟೆಯಲ್ಲಿ , ಕಾಂಗ್ರೇಸ್ ನಾಯಕರ ಪ್ರಹಸನ, ಮತ್ತು ಇಷ್ಟೆಲ್ಲಾ ಬೆಳವಣಿಗೆ ಮುಂದಿನ ಬಾರಿ ಕಾಂಗ್ರೇಸ್ ಗೆ ಮುಳುವಾಗಲಿದೆ , ಇವರ ಎಲ್ಲಾ ನಡವಳಿಕೆ ಗಮನಿಸಿರುವ ಇಲ್ಲಿಯ ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಗೆ ತಕ್ಕ ಪಾಠ ಕಲಿಸಲು ಕಾದು ಕುಳಿತಿದ್ದಾರೆ.. ಎಂದು ತಿಳಿದು ಬಂದಿದೆ. ತನ್ನನ್ನು ನಂಬಿ ರಾಜಿನಾಮೆ ನೀಡಿರುವ ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ಶೌವಾದ್ ಗೂನಡ್ಕ ಹಾಗು ವಿಮಲಾ ಪ್ರಸಾದ್ ಅವರ ಬೆನ್ನಿಗೆ ಸೋಮಶೇಖರ್ ಕೊಯಿಂಗಾಜೆ ನಿಲ್ತಾರಾ ..ಅಥವಾ ಪಕ್ಷಕ್ಕಾಗಿ ಮೂವರ ಸದಸ್ಯರ ರಾಜಿನಾಮೆ ಬಲಿದಾನವಾಯ್ತಾ… ಕಾದು ನೋಡಬೇಕಾಗಿದೆ…

