

ವಿಟ್ಲ: ನವೀನ್ ಕುಮಾರ್ ಪಾದೆಕಲ್ಲು ಮಾಲಕತ್ವದ ಶ್ರೀಗಾಣ ಎಂಟರ್‌ಪ್ರೈಸಸ್ ಇದರ ಉದ್ಘಾಟನಾ
ಸಮಾರಂಭ ಹಾಗೂ ಗಾಣದ ತೆಂಗಿನ ಎಣ್ಣೆ ಮತ್ತು
ಎಳ್ಳೆಣ್ಣೆ ಉತ್ಪನ್ನಗಳ ಲೋಕಾರ್ಪಣಾ ಸಮಾರಂಭ
ಕನ್ಯಾನ ಕರೋಪಾಡಿ ನೆಲ್ಲಿಕಟ್ಟೆ ಬಸ್ಸು ನಿಲ್ದಾಣ ಬಳಿ
ಶುಭಾರಂಭಗೊಂಡಿತು.ಒಡಿಯೂರು ಗುರುದೇವಾನಂದ ಸ್ವಾಮೀಜಿ ದೀಪ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ
ಶಾಸಕ ರಾಜೇಶ್ ನಾಯ್ಕ ಜಿಲ್ಲಾ ಸಂಪನ್ಮೂಲ ವ್ಯಕ್ತಿ
MOFPI, ಭಾರತ ಸರಕಾರ, ಆಹಾರ ವಿಜ್ಞಾನಿ ಹಾಗೂ
ನಿವೃತ್ತ ಪ್ರಾಧ್ಯಾಪಕರಾದ ಡಾ.ಎ.ಎ ಫಝಲ್,
ಕರೋಪಾಡಿ ಗ್ರಾ.ಪಂ.ಅಧ್ಯಕ್ಷ ಅನ್ವರ್ ಕರೋಪಾಡಿ,
ಕನ್ಯಾನ ಗ್ರಾ.ಪಂ.ಸದಸ್ಯ ರಘುರಾಮ ಶೆಟ್ಟಿ, ವಿಟ್ಲ
ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘದ
ಅಧ್ಯಕ್ಷ ಉದಯಕುಮಾರ್ ದಂಬೆ, ಗೋಪಾಲ
ಕುದ್ದುಪದವು,ಕರೋಪಾಡಿ,ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು ಮಾಲಕಿ ಶ್ರೀ ವಿದ್ಯಾ ಸ್ವಾಗತಿಸಿ ಲೀಲಾ ಕಮ್ಮಾಜೆ ವಂದಿಸಿ, ನಾಗೇಶ್ ಪಾಟಾಳಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.
