ಫುಟ್‌ಬಾಲ್ ಫಿಫಾ ವಿಶ್ವಕಪ್: ಕತಾರ್ ವಿರುದ್ಧ ಈಕ್ವೆಡಾರ್‌ಗೆ ರೋಚಕ ಗೆಲುವು.

ಫುಟ್‌ಬಾಲ್ ಫಿಫಾ ವಿಶ್ವಕಪ್: ಕತಾರ್ ವಿರುದ್ಧ ಈಕ್ವೆಡಾರ್‌ಗೆ ರೋಚಕ ಗೆಲುವು.

ದೋಹಾ: ಈಕ್ವೆಡಾರ್ ತಂಡ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಭಾನುವಾರ ಮೊದಲ ಪಂದ್ಯದಲ್ಲಿ ಈಕ್ವೆಡಾರ್ 2-0 ಗೋಲುಗಳ ಅಂತರದಲ್ಲಿ ಆತಿಥೇಯ ಕತಾರ್‌ ತಂಡವನ್ನು ಮಣಿಸಿತು.
ಈಕ್ವೆಡಾರ್ ತಂಡದ ಎರಡೂ ಗೋಲುಗಳನ್ನು ಅನುಭವಿ ಸೈಕರ್ ಎನೆರ್ ವಲೆನ್ಸಿಯಾ ಗಳಿಸಿದರು. ರೂವಾರಿ ಎನಿಸಿದರು. ಎರಡೂ ಗೋಲುಗಳು ಮೊದಲ ಅವಧಿಯಲ್ಲಿ ದಾಖಲಾದವು. ಚೊಚ್ಚಲ ವಿಶ್ವಕಪ್ಪಂದ್ಯವನ್ನಾಡಿದ ಕತಾರ್ ಪರ ತಂಡದ ಸ್ಟಾರ್ ಆಟಗಾರ ಅಯ್ಯೋಜ್ ಅಲಿ ಮತ್ತು ಮೊಹಮ್ಮದ್ ಮುಂತರಿ ನೇತೃತ್ವದಲ್ಲಿ ಬಿರುಸಿನ ಪೈಪೋಟಿ ನೀಡಿದರೂ ದಕ್ಷಿಣ ಅಮೆರಿಕದ ಈಕ್ವೆಡಾರ್ ಪ್ರತಿರೋಧ ತೋರಿ ಗೆಲುವಿನ ಮೂಲಕ ಶುಭಾರಂಭ ಮಾಡಿತು. 16ನೇ ನಿಮಿಷದಲ್ಲಿ ಗೋಲು ಗಳಿಸಲು ಮುನ್ನುಗ್ಗಿದ ವಲೆನ್ಸಿಯಾ ಅವರನ್ನು ಎದುರಾಳಿ ಗೋಲ್‌ಕೀಪರ್ ಸಾದ್ ಅಲ್‌ಶೀಬ್ ಕೆಳಕ್ಕೆ ಬೀಳಿಸಿದರು. ಅದಕ್ಕೆ ರೆಫರಿ ಪೆನಾಲ್ಟಿ ಅವಕಾಶ ನೀಡಿದರು. ಪೆನಾಲ್ಟಿ ಕಿಕ್‌ನಲ್ಲಿ ಎನೆರ್ ಗೋಲು ಗಳಿಸಿ ತಂಡಕ್ಕೆ ಮುನ್ನಡೆ
ತಂದುಕೊಟ್ಟರು. 31ನೇ ನಿಮಿಷದಲ್ಲಿ ಎನೆರ್ ಎರಡನೇ
ಗೋಲು ಗಳಿಸಿದರು. ಏಂಜೆಲೊ ಪ್ರೆಸಿಯಾಡೊ ನೀಡಿದ
ಕ್ರಾಸ್‌ನಲ್ಲಿ ಚೆಂಡನ್ನು ಹೆಡ್ ಮಾಡಿ ಗುರಿ ಸೇರಿಸಿದರು.
ಅವರಿಗೆ ಗೋಲು ಗಳಿಸಲು ಉತ್ತಮ ಅವಕಾಶ ದೊರೆತರೂ ಚೆಂಡನ್ನು ಗುರಿ ಸೇರಿಸಲು ವಿಫಲರಾದರು.

ಕ್ರೀಡೆ