ಜಟ್ಟಿಪಳ್ಳದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಪ್ರಭಾಕರ ನಿಧನ.
ಸುಳ್ಯ ಜಟ್ಟಿಪಳ್ಳ ದಲ್ಲಿ ನವೆಂಬರ್ 3ರಂದು ನಡೆದ ನ್ಯಾನೋ ಕಾರು ಮತ್ತು ಅಟೋ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಟೋ ಚಾಲಕ ಪ್ರಭಾಕರ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ,ಪುತ್ರ, ಪುತ್ರಿ ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.…










