10 ನಿಮಿಷದ ಡೆಲಿವರಿ ಭರವಸೆ ಕೈಬಿಟ್ಟ ಬ್ಲಿಂಕಿಟ್; ಸ್ವಿಗ್ಗಿ, ಜೆಪ್ಟೋ ಕೂಡ ಇದೇ ಹಾದಿಯಲ್ಲಿ?
ನವದೆಹಲಿ: ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಬ್ಲಿಂಕಿಟ್' (Blinkit) ತನ್ನ ಪ್ಲಾಟ್‌ಫಾರ್ಮ್‌ಗಳಿಂದ '10 ನಿಮಿಷಗಳಲ್ಲಿ ಡೆಲಿವರಿ' ಎಂಬ ವಿವಾದಿತ ಟ್ಯಾಗ್‌ಲೈನ್ ಅನ್ನು ಅಧಿಕೃತವಾಗಿ ತೆಗೆದುಹಾಕಿದೆ. ಡೆಲಿವರಿ ಪಾಲುದಾರರ ಸುರಕ್ಷತೆ ಮತ್ತು ಕೆಲಸದ ಒತ್ತಡದ ಕುರಿತು ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.…









