ಚುನಾವಣಾ ಫಲಿತಾಂಶಕ್ಕೆ ಮುನ್ನವೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್!.
ರಾಜ್ಯ

ಚುನಾವಣಾ ಫಲಿತಾಂಶಕ್ಕೆ ಮುನ್ನವೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್!.

ಬೆಂಗಳೂರು: ಮತದಾನ ಮುಗಿಯುತ್ತಿದ್ದಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ದರ ಏರಿಕೆ ಶಾಕ್ ನೀಡಿದೆ. ಪ್ರತಿ ಯೂನಿಟ್ ವಿದ್ಯುತ್‌ಗೆ 140 ಪೈಸೆ ಏರಿಕೆಗೆ ಎಸ್ಕಾಂ ಸಂಸ್ಥೆ ಮನವಿ ಮಾಡಿತ್ತು. ಆದರೆ ಪ್ರತಿ ಯೂನಿಟ್ ವಿದ್ಯುತ್‌ಗೆ 70 ಪೈಸೆ ಏರಿಕೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಒಪ್ಪಿಗೆ ನೀಡಿದೆ. ಏಪ್ರಿಲ್…

ಬಿಜೆಪಿಗೆ ಬಹುಮತ ಬರದಿದ್ದರೆ ‘ಪ್ಲಾನ್ B’ ರೆಡಿ ಇದೆ ಎಂದ ಆರ್. ಅಶೋಕ್.
ರಾಜ್ಯ

ಬಿಜೆಪಿಗೆ ಬಹುಮತ ಬರದಿದ್ದರೆ ‘ಪ್ಲಾನ್ B’ ರೆಡಿ ಇದೆ ಎಂದ ಆರ್. ಅಶೋಕ್.

ಬೆಂಗಳೂರು, ಮೇ 12: ರಾಜ್ಯ ವಿಧಾನಸಭೆ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರ ಹೇಳಿಕೆಗಳು ಕುತೂಹಲ ಮೂಡಿಸುತ್ತಿದೆ. ಕಂದಾಯ ಸಚಿವ ಆರ್.ಅಶೋಕ್ ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ , ‘ಬಿಜೆಪಿಗೆ ಬಹುಮತ ಬರದಿದ್ದರೆ ಪ್ಲಾನ್ ‘ಬಿ’ ರೆಡಿ ಇದೆ’ ಎಂದು ಹೇಳಿದ್ದಾರೆ. ”ಇನ್ನೊಂದು ವರ್ಷದಲ್ಲಿ ಲೋಕಸಭಾ…

ಸುಬ್ರಹ್ಮಣ್ಯ :ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳಿಂದ ಅಪ್ರಾಪ್ತ ಬಾಲಕಿಯ ರಕ್ಷಣೆ.
ರಾಜ್ಯ

ಸುಬ್ರಹ್ಮಣ್ಯ :ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳಿಂದ ಅಪ್ರಾಪ್ತ ಬಾಲಕಿಯ ರಕ್ಷಣೆ.

ಪಲ್ಗುಣಿ ಎಂಬ ಅಪರಿಚಿತ ಬಾಲಕಿಯನ್ನು ರಕ್ಷಣೆ ಮಾಡಿ ಮೂಡಬಿದ್ರೆ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಮಹಿಳಾ ಪೊಲೀಸ್ ಅಧಿಕಾರಿ ಜೊತೆಯಲ್ಲಿ ಕಳಿಸಿ ರಕ್ಷಣೆ ನೀಡಿದ ಘಟನೆ ನಡೆದಿದೆ. ಹಿಂದಿ ಮಾತಾಡುವ ಹುಡುಗಿ ಏಳನೇ ತರಗತಿಯಲ್ಲಿ ಓದುತ್ತಿದ್ದೇನೆ ಸಿದ್ದಾಪುರದಿಂದ ಬಂದಿದ್ದೇನೆ. ಎನ್ನುತ್ತಿದ್ದ ಹುಡುಗಿಯನ್ನು ಸಮಾಜ ಸೇವಕ ರವಿಕಕ್ಕೆ ಪದವು ಹಾಗೂ ಸ್ಥಳೀಯರು…

ಕದ್ರಿ ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ ಮೂವರು ಪೊಲೀಸ್ ವಶಕ್ಕೆ.
ರಾಜ್ಯ

ಕದ್ರಿ ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ ಮೂವರು ಪೊಲೀಸ್ ವಶಕ್ಕೆ.

ಮಂಗಳೂರು ಮೇ 12 : ಮಂಗಳೂರಿನ ಪ್ರಸಿದ್ದ ಕದ್ರಿ ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೈಕ್ ನಲ್ಲಿ ಬಂದ ಮೂವರು ದೇವಾಲಯದ ಆವರಣ ಪ್ರವೇಶಿಸಿದ್ದಾರೆ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಮೂವರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಸೈಗೋಳಿ ನಿವಾಸಿ ಹಸನ್…

ಮಾಜಿ ಸಚಿವ ಈಶ್ವರಪ್ಪ ಸುಬ್ರಹ್ಮಣ್ಯ ಭೇಟಿ.
ರಾಜ್ಯ

ಮಾಜಿ ಸಚಿವ ಈಶ್ವರಪ್ಪ ಸುಬ್ರಹ್ಮಣ್ಯ ಭೇಟಿ.

ಮಾಜಿ ಸಚಿವ, ಬಿಜೆಪಿಯ ಪ್ರಭಾವ ಮುಖಂಡ ಈಶ್ವರಪ್ಪ ಅವರು ಇಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಆಶ್ಲೇಷ ಪೂಜೆ ನೆರವೇರಿಸಿದ್ದಾರೆ. ಅವರ ಮಗ ಕಾಂತೇಶ್ ಮತ್ತು ಸೊಸೆ ಆದಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉರುಳು ಸೇವೆಯನ್ನು ಪೂರೈಸಿದ್ದಾಗಿ ತಿಳಿದು ಬಂದಿದೆ.

ಸುಳ್ಯ ಸೂರ್ತಿಲದಲ್ಲಿ ಮೇ.21 ಮತ್ತು 22 ರಂದು ಶ್ರೀ ರಕ್ತೇಶ್ವರಿ ಕ್ಷೇತ್ರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ದೈವಗಳ ನೇಮೋತ್ಸವ:
ರಾಜ್ಯ

ಸುಳ್ಯ ಸೂರ್ತಿಲದಲ್ಲಿ ಮೇ.21 ಮತ್ತು 22 ರಂದು ಶ್ರೀ ರಕ್ತೇಶ್ವರಿ ಕ್ಷೇತ್ರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ದೈವಗಳ ನೇಮೋತ್ಸವ:

ಸುಳ್ಯ ನಗರದ ಕಾಯರ್ತೋಡಿ ವಿಷ್ಣು ನಗರ ಸೂರ್ತಿಲದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ರಕ್ತೇಶ್ವರಿ ಮತ್ತು ಗುಳಿಗ ಮತ್ತು ನಾಗದೇವರ ಕ್ಷೇತ್ರದಲ್ಲಿ ಮೇ.21ಮತ್ತು 22ರಂದು ಪ್ರತಿಷ್ಠಾ ಬ್ರಹ್ಮ ಕಲಶ ಮತ್ತು ನೇಮೋತ್ಸವ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಲೀಲಾಧರ್ ಡಿ.ವಿ…

ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಶೇ.100 ಫಲಿತಾಂಶ.
ರಾಜ್ಯ

ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಶೇ.100 ಫಲಿತಾಂಶ.

ಭಾರತ ಸರ್ಕಾರದಿಂದ ಪ್ರವರ್ತಿತ ರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ ಭಾರತ್ ಸೇವಕ್ ಸಮಾಜದ ಅಂಗೀಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ 2022 -23ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ (ಡಿಮ್ಇಡಿ) ಫಲಿತಾಂಶ ಪ್ರಕಟಗೊಂಡಿದ್ದು , 6ನೇ ಬ್ಯಾಚ್ ನ ಎಲ್ಲಾ 24 ವಿದ್ಯಾರ್ಥಿ ಶಿಕ್ಷಕಿಯರು ಉತ್ತೀರ್ಣರಾಗುವ…

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಟ ರಿಷಬ್ ಶೆಟ್ಟಿ : ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ.
ರಾಜ್ಯ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಟ ರಿಷಬ್ ಶೆಟ್ಟಿ : ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ.

ಕಾಂತಾರ ಸಿನಿಮಾ ಮೂಲಕ ದೇಶದಾಧ್ಯಂತ ಬಾರೀ ಖ್ಯಾತಿ ಪಡೆದಿರುವ ಕನ್ನಡ ಚಲನ ಚಿತ್ರ ನಟ ರಿಷಭ್ ಶೆಟ್ಟಿ ಕುಟುಂಬ ಸಮೇತರಾಗಿ ಕುಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಅಭಿಮಾನಿಗಳು ಸೆಲ್ಪಿಗಾಗಿ ಮುಗಿಬಿದ್ದರು.

ರಾಜ್ಯ ವಿಧಾನ ಸಭಾ ಚುನಾವಣೆ :  ಮತದಾನ ಮುಕ್ತಾಯ: ಕ್ಷೇತ್ರದಾಧ್ಯಂತ ಶಾಂತಿಯುತ ಮತದಾನ:ಸುಳ್ಯಕ್ಷೇತ್ರದಲ್ಲಿ  ಶೇ.78.94  ಮತದಾನ.
ರಾಜ್ಯ

ರಾಜ್ಯ ವಿಧಾನ ಸಭಾ ಚುನಾವಣೆ :  ಮತದಾನ ಮುಕ್ತಾಯ: ಕ್ಷೇತ್ರದಾಧ್ಯಂತ ಶಾಂತಿಯುತ ಮತದಾನ:
ಸುಳ್ಯಕ್ಷೇತ್ರದಲ್ಲಿ  ಶೇ.78.94  ಮತದಾನ.

43,364 ಮಂದಿ  ಸುಳ್ಯ ಕ್ಷೇತ್ರದಲ್ಲಿ ಮತದಾನ ಮಾಡಿಲ್ಲ..! ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ಸುಳ್ಯ ಕ್ಷೇತ್ರದಲ್ಲಿ ಮತದಾನ ಮುಕ್ತಾಯ ವಾಗಿದ್ದು  ಶೇ ..ಮತದಾನ ದಾಖಲಾಗಿದೆ , ಒಟ್ಟು ಕ್ಷೇತ್ರದಲ್ಲಿ  2 ಲಕ್ಷದ 6 ಸಾವಿರ ಮತದಾರರಲ್ಲಿ 1,62,636  ಮಂದಿ ಒಟ್ಟು  ಕ್ಷೇತ್ರದಲ್ಲಿ ಮತ ಚಲಾಯಿಸಿದ್ದಾರೆ81,401 ಪುರುಷ ಮತದಾರರು ಮತ ಚಲಾಯಿಸಿದ್ದಾರೆ.…

ಕಾವೂರು ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ.
ರಾಜ್ಯ

ಕಾವೂರು ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ.

ಮಂಗಳೂರು: ಮೂಡುಶೆಡ್ಡೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾವೂರು ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಹೊರಗಿನ ವ್ಯಕ್ತಿಗಳಿಗೆ ಮೂಡುಶೆಡ್ಡೆ ವ್ಯಾಪ್ತಿಯೊಳಗೆ ಅವಕಾಶವಿಲ್ಲ. ಮೂಡುಶೆಡ್ಡೆಯ ವ್ಯಾಪ್ತಿಯ ಬಹುತೇಕ ಕಡೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ.ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾವುದೇ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI