
ಬೆಂಗಳೂರು: ಮತದಾನ ಮುಗಿಯುತ್ತಿದ್ದಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ದರ ಏರಿಕೆ ಶಾಕ್ ನೀಡಿದೆ.


ಪ್ರತಿ ಯೂನಿಟ್ ವಿದ್ಯುತ್‌ಗೆ 140 ಪೈಸೆ ಏರಿಕೆಗೆ ಎಸ್ಕಾಂ ಸಂಸ್ಥೆ ಮನವಿ ಮಾಡಿತ್ತು. ಆದರೆ ಪ್ರತಿ ಯೂನಿಟ್ ವಿದ್ಯುತ್‌ಗೆ 70 ಪೈಸೆ ಏರಿಕೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಒಪ್ಪಿಗೆ ನೀಡಿದೆ. ಏಪ್ರಿಲ್ 1, 2023ರಿಂದ ಅನ್ವಯ ಆಗುವಂತೆ ನೂತನ ದರ ಏರಿಕೆ ಮಾಡುವುದಾಗಿ KERC ಹೇಳಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಈಗಷ್ಟೇ ಮುಗಿದಿದೆ. ನಾಳೆ ಮತಎಣಿಕೆ ನಡೆಯಲಿದ್ದು ಮಹತ್ವದ ಫಲಿತಾಂಶ ಹೊರ ಬೀಳಲಿದೆ. ಚುನಾವಣಾ ಪ್ರಚಾರದ ಮಧ್ಯೆ ವಿವಿಧ ಪಕ್ಷಗಳು ಮತದಾರರಿಗೆ ಹಲವು ಭರವಸೆಗಳನ್ನ ಕೊಟ್ಟಿದ್ದರು. ಪ್ರಮುಖವಾಗಿ ಕಾಂಗ್ರೆಸ್ ನಾಯಕರು 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗ್ಯಾರಂಟಿಯನ್ನೇ ಕೊಟ್ಟಿದ್ದಾರೆ