ಮೀನುಗಾರಿಕಾ ಕಾಲೇಜಿನ‌‌ಲ್ಲಿಅಂಬೇಡ್ಕರ್ ಜಯಂತಿ ಆಚರಣೆ

ಮೀನುಗಾರಿಕಾ ಕಾಲೇಜಿನ‌‌ಲ್ಲಿಅಂಬೇಡ್ಕರ್ ಜಯಂತಿ ಆಚರಣೆ

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ
ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ 135 ನೇ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಯೋಗಿಶ್ ಕೈರೋಡಿ ಉದ್ಘಾಟಿಸಿ ಮಾತನಾಡಿದರು. ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರು ಪ್ರಾಥಮಿಕ ಶಿಕ್ಷಣ, ಅವರು ಬೆಳೆದು ಬಂದ ರೀತಿ, ಉನ್ನತ ಶಿಕ್ಷಣ, ಸಂವಿಧಾನದ ರಚನೆ, ಜಾತ್ಯಾತೀತದ ಬಗ್ಗೆ ಹೋರಾಟ, ಸಮಾನತೆ ಮುಂತಾದ ವಿಚಾರಗಳ ಬಗ್ಗೆ ಸಂಕ್ಷಿಪ್ತವಾಗಿ ವಿಷಯ ಮಂಡಿಸಿದರು. ಅಂಬೇಡ್ಕರ್ ಅವರು ತಮ್ಮ ಬಾಲ್ಯ ಜೀವನದಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳ ಬಗ್ಗೆ ಮತ್ತು ಅವರು ಪಟ್ಟಂತಹ ಶ್ರಮವನ್ನು ವಿವರವಾಗಿ ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ. ಎ.ಟಿ. ರಾಮಚಂದ್ರ ನಾಯ್ಕ್ ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ರವರು ತಮ್ಮ ಬಾಲ್ಯ ಜೀವನದಲ್ಲಿ ಶಾಲೆಯಲ್ಲಿ ಕಲಿಯುತ್ತಿರುವಾಗ ಇತರೆ ಸಮುದಾಯದ ವಿದ್ಯಾರ್ಥಿಗಳ ಜೊತೆ ಪಾಠವನ್ನು ಕಲಿಯುವಾಗ ಪಟ್ಟಂತಹ ಶ್ರಮ ಹೇಗಿತ್ತು ಮತ್ತು ಅದರಿಂದ ಅವರು ಅನುಭವಿಸಿದ ಸನ್ನಿವೇಶವನ್ನು ಉದಾಹರಣೆಯ ಮೂಲಕ ವಿವರಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸುವಲ್ಲಿ ಅವರ ಪಾತ್ರ ಮತ್ತು ಅದನ್ನು ಅಂಗೀಕಾರ ಮಾಡುವಾಗ ಪೂರ್ವ ಸ್ವತಂತ್ರ ಭಾರತದಲ್ಲಿ ಇದ್ದಂತಹ ಆಡಳಿತ ವ್ಯವಸ್ಥೆ ಮತ್ತು ಅವರ ಆಶಯಗಳನ್ನು ಇಡೀ ದೇಶಕ್ಕೆ ತಲುಪಿಸಲು ಪಟ್ಟಂತಹ ಪ್ರಯತ್ನ ಮತ್ತು ಪ್ರಾಮಾಣಿಕತೆಯ ಬಗ್ಗೆ ವಿವರಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ರವರು ಒಟ್ಟು 32 ಪದವಿಗಳನ್ನು ದೇಶಿಯ ಮತ್ತು ವಿದೇಶಿಯ ಮಟ್ಟದಲ್ಲಿ ಗಳಿಸಿದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿಯಾಗಿ ಕಾಲೇಜಿನ ಮೀನುಗಾರಿಕೆ ವಿಜ್ಞಾನಗಳ ವಿಭಾಗದ ಮುಖ್ಯಸ್ಥರಾದಂತಹ ಡಾ. ಎಸ್ ವರದರಾಜು ರವರು ಡಾ. ಬಿ.ಆರ್. ಅಂಬೇಡ್ಕರ್ ರವರ ಜೀವನ, ಅವರು ಪಟ್ಟಂತಹ ಶ್ರಮ ಹಾಗೂ ಅವರ ಜೀವನದಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯ ಗಳನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಡೀನ್ ಡಾ. ಎಚ್.ಎನ್. ಅಂಜನೇಯಪ್ಪ ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ರವರು ಬರೆದಂತಹ ಹೆಸರಾಂತ ಪುಸ್ತಕಗಳನ್ನು ಎಲ್ಲರೂ ಓದಬೇಕು ಮತ್ತು ಅದನ್ನು ಅರ್ಥೈಸಿಕೊಂಡು ಎಲ್ಲರ ಜೀವನದಲ್ಲಿ ಆ ಮಹಾನ್ ವ್ಯಕ್ತಿಯ ಮಾರ್ಗವನ್ನು ಪಾಲಿಸಬೇಕು ಎಂದು ಹೇಳಿದರು.

ಕಾಲೇಜಿನ ಪ. ಜಾ. ಪ.ಪಂ. ದ ಸಂಯೋಜಕರಾದ ಡಾ. ಜಯಾ ನಾಯ್ಕ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮೀನುಗಾರಿಕಾ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.

ಪಿಹೆಚ್. ಡಿ. ಪದವಿ ವಿದ್ಯಾರ್ಥಿ ನಿಖಿಲ್ ವಂದಿಸಿದರು. ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಅಶ್ವಿನಿ ಪಿ. ನಿರೂಪಿಸಿದರು.

ಪ್ರಾದೇಶಿಕ ರಾಜ್ಯ ರಾಷ್ಟ್ರೀಯ