🔴 2026ರ ಟಿ20 ವಿಶ್ವಕಪ್ ಫೈನಲ್ ಅಹಮದಾಬಾದ್‌ನಲ್ಲಿ: ಪಾಕಿಸ್ತಾನ ಫೈನಲ್‌ಗೆ ಬಂದರೆ ಕೊಲಂಬೋದಲ್ಲಿ!

🔴 2026ರ ಟಿ20 ವಿಶ್ವಕಪ್ ಫೈನಲ್ ಅಹಮದಾಬಾದ್‌ನಲ್ಲಿ: ಪಾಕಿಸ್ತಾನ ಫೈನಲ್‌ಗೆ ಬಂದರೆ ಕೊಲಂಬೋದಲ್ಲಿ!

2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಭಾರತ ಮತ್ತು ಶ್ರೀಲಂಕಾದ ಸಹಯೋಗದಲ್ಲಿ ಫೆಬ್ರವರಿಯಿಂದ ಮಾರ್ಚ್ ವರೆಗೆ ನಡೆಯಲಿದೆ. ಒಟ್ಟು 20 ತಂಡಗಳು 55 ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದು, ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನವಾದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗ್ರ್ಯಾಂಡ್ ಫೈನಲ್ ನಿಗದಿಯಾಗಿದೆ. 1.10 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಈ ಮೈದಾನ ವಿಶ್ವದ ಅತಿ ದೊಡ್ಡ ಕ್ರೀಡಾಂಗಣವಾಗಿದೆ.

ಭಾರತದ ಪ್ರಮುಖ ಮೈದಾನಗಳಾದ ಕೋಲ್ಕತ್ತಾದ ಈಡನ್ ಗಾರ್ಡನ್, ಚೆನ್ನೈನ ಎಂಎ ಚಿದಂಬರಂ, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಶ್ರೀಲಂಕಾದಲ್ಲೂ ಕೆಲವು ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

ಐಸಿಸಿ ನಿರ್ಧಾರದಂತೆ, ಭಾರತ-ಪಾಕಿಸ್ತಾನ ನಡುವಿನ ಎಲ್ಲಾ ಪಂದ್ಯಗಳು ಶ್ರೀಲಂಕಾದ ಮೈದಾನಗಳಲ್ಲಿ ನಡೆಯಲಿವೆ, ಭಾರತದಲ್ಲಿ ನಡೆಯುವುದಿಲ್ಲ.

ಟೂರ್ನಿಯಲ್ಲಿ ಗುಂಪು ಹಂತ, ಸೂಪರ್ 8, ಸೆಮಿಫೈನಲ್ ಹಾಗೂ ಫೈನಲ್ ನಡೆಯಲಿದ್ದು, ಅತ್ಯಂತ ಕಠಿಣ ಸ್ಪರ್ಧಾತ್ಮಕ ಆವೃತ್ತಿಯಾಗಲಿದೆ.

👉 ವಿಶೇಷವಾಗಿ, ಪಾಕಿಸ್ತಾನ ಫೈನಲ್‌ಗೆ ತಲುಪಿದರೆ, ಫೈನಲ್ ಪಂದ್ಯವನ್ನು ಅಹಮದಾಬಾದ್‌ನಲ್ಲಿ ಅಲ್ಲ, ಶ್ರೀಲಂಕಾದ ಕೊಲಂಬೋದಲ್ಲಿ ಆಯೋಜಿಸಲಾಗುವುದು ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಅಂತರಾಷ್ಟ್ರೀಯ ಕ್ರೀಡೆ