ಕಾಂತಾರಾ ಚಾಪ್ಟರ್ 1 – ಕನಕವತಿ’ ಪಾತ್ರದಲ್ಲಿ ರುಕ್ಮಿಣಿ ವಸಂತ್‌

ಕಾಂತಾರಾ ಚಾಪ್ಟರ್ 1 – ಕನಕವತಿ’ ಪಾತ್ರದಲ್ಲಿ ರುಕ್ಮಿಣಿ ವಸಂತ್‌

ಹೋಂಬಾಳೆ ಫಿಲ್ಮ್ಸ್‌ ಭಾರಿ ನಿರೀಕ್ಷೆಯ ‘ಕಾಂತಾರಾ ಚಾಪ್ಟರ್ 1’ ಚಿತ್ರದಲ್ಲಿ ನಾಯಕಿಯಾಗಿ ನಟಿ ರುಕ್ಮಿಣಿ ವಸಂತ್‌ ಅವರನ್ನು ‘ಕನಕವತಿ’ ಪಾತ್ರದಲ್ಲಿ ಪರಿಚಯಿಸಿದೆ. ವರ ಮಹಾಲಕ್ಷ್ಮೀ ಹಬ್ಬದ ಶುಭ ಸಂದರ್ಭದಲ್ಲಿ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ.

ಈ ಚಿತ್ರವನ್ನು ಬರಹ ಮತ್ತು ನಿರ್ದೇಶನ ಮಾಡಿರುವ ರಿಷಭ್‌ ಶೆಟ್ಟಿ ಅವರು ನಾಯಕನ ಪಾತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. 2022ರ ಬ್ಲಾಕ್‌ಬಸ್ಟರ್‌ ಕಾಂತಾರಾಗೆ ಪ್ರೀಕ್ವೆಲ್‌ ಆಗಿ ಬರುತ್ತಿರುವ ಈ ಮಹಾಕಾವ್ಯ ಶೈಲಿಯ ಚಿತ್ರ, ಗ್ರಾಮೀಣ ನೆಲೆಯ ಕಥಾನಕವನ್ನು ನೂತನ ದೃಷ್ಟಿಕೋನದಲ್ಲಿ ತಲುಪಿಸುವ ಭರವಸೆ ನೀಡುತ್ತಿದೆ.

ಈ ವರ್ಷ ಆರಂಭದಲ್ಲಿ ರಿಷಭ್‌ ಶೆಟ್ಟಿಯವರ ಫಸ್ಟ್‌ ಲುಕ್‌ ಹುಟ್ಟುಹಬ್ಬದಂದು ಅನಾವರಣಗೊಂಡಿತ್ತು. ಇತ್ತೀಚೆಗೆ ಬಿಡುಗಡೆಯಾದ ಮೇಕಿಂಗ್‌ ವ ವೀಡಿಯೊ ಕೂಡ ಚಿತ್ರಕ್ಕೆ ಹೆಚ್ಚಿನ ಕುತೂಹಲ ಮೂಡಿಸಿದೆ. ಇದೀಗ ರುಕ್ಮಿಣಿ ವಸಂತ್‌ ಅವರ ಕನಕವತಿ ಲುಕ್‌ ಬಿಡುಗಡೆಯಾಗಿದ್ದು, ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಹೆಚ್ಚಿಸಿದೆ.

ಅರವಿಂದ್ ಎಸ್‌. ಕಶ್ಯಪ್‌ ಅವರ ಛಾಯಾಗ್ರಹಣ, ಬಿ. ಅಜನೀಷ್‌ ಲೋಕನಾಥ್‌ ಅವರ ಸಂಗೀತ ಮತ್ತು ವಿಜಯ್‌ ಕಿರಗಂದೂರು ಅವರ ನಿರ್ಮಾಣದಲ್ಲಿ ಹೊಂಬಾಳೆ ಫಿಲ್ಮ್ಸ್‌ ಈ ಚಿತ್ರವನ್ನು ಭವ್ಯವಾಗಿ ತರುತ್ತಿದೆ.

ಕಾಂತಾರಾ ಚಾಪ್ಟರ್‌ 1 2025ರ ಅಕ್ಟೋಬರ್‌ 2ರಂದು ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ವಿಶ್ವವ್ಯಾಪಿ ಬಿಡುಗಡೆಯಾಗಲಿದೆ.

ಮನೋರಂಜನೆ ರಾಜ್ಯ ರಾಷ್ಟ್ರೀಯ