
ಈ ವಾರ ಮಜಾ ಟಾಕೀಸ್‌ನಲ್ಲಿ ಪ್ರೇಮಿಗಳ ದಿನದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸಂಚಿಕೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ, ನಟ, ವಾಸುಕಿ ವೈಭವ್ ಮತ್ತು ವೃಂದಾ ಜೊತೆಗೆ ಚಿತ್ರನಟ, ಕಥೆಗಾರ ನಾಗಭೂಷಣ್ ಎನ್ ಹೆಚ್ ಅವರ ಪತ್ನಿ ಪೂಜಾ ಬಂದಿದ್ದರು.


ಕಾರ್ಯಕ್ರಮದ ನಿರೂಪಕ ಸೃಜನ್ ಮಾತಿನ ಮಧ್ಯೆ “ನಿಮ್ಮ ಮಧ್ಯೆ ಪ್ರೀತಿ ಹೇಗಾಯಿತು” ಎಂದಾಗ, ವಾಸುಕಿ ಪತ್ನಿ ವೃಂದಾ, “ನಾವು ಮೊದಲು ಆತ್ಮೀಯ ಸ್ನೇಹಿತರಾಗಿದ್ದೆವು. ಕ್ರಮೇಣ ಪ್ರೀತಿಯಾಗಿ ಬದಲಾಯಿತು” ಎಂದಿದ್ದಾರೆ. ಮೊದಲೇ ರಂಗಭೂಮಿಯಲ್ಲಿ ಗೆಳೆಯರಾಗಿದ್ದವರು ಒಂದು ರಾತ್ರಿ ಪೊಲೀಸ್ ಕೈಯಲ್ಲಿ ಬೈಸಿಕೊಂಡಿದ್ದರಂತೆ.

ಇನ್ನು ನಾಗಭೂಷಣ ಅವರು ಚಾಮರಾಜನಗರದವರು. ಅವರ ಪತ್ನಿ ಪೂಜಾ ಗದಗದವರು. ಇಬ್ಬರ ಜೀವನ ಶೈಲಿಯಲ್ಲಿ ವ್ಯತ್ಯಾಸಗಳಿದ್ದರೂ, ಪರಸ್ಪರ ಗೌರವಿಸುತ್ತಾ ಮುಂದೆ ಸಾಗುತ್ತಿದ್ದಾರೆ. ತಮ್ಮ ಜೋಡಿಯ ಬಗ್ಗೆ ತಮಾಷೆ ಮಾಡುತ್ತಾ ನಾಗಭೂಷಣ್ ಅವರು “ನಾನು ಗದುಗಿನ ನಾರಾಯಣಪ್ಪ ಕುಮಾರವ್ಯಾಸ ಹಾಗಾಗಿ ನಾನು ಗದುಗಿನ ಹುಡುಗಿನ ಮದುವೆ ಆಗಿ ಆದೆ ನಾಗಪ್ಪ” ಎನ್ನುತ್ತಾರೆ. ಗದಗದಲ್ಲಿ ಕಂಪನಿ ನಾಟಕಗಳು ಆಗಾಗ್ಗೆ ನಡೆಯುತ್ತಿರುತ್ತವಂತೆ. ಅದರ ಹೆಸರುಗಳು ಗಂಗಿ ಮನ್ಯಾಗ ಗೌರಿ ಹೊಲದಾಗ, ಅಪ್ಪ ಸಂದಿಯಾಗ ಮಗ ಮಂದಿಯಾಗ ಹೀಗೆ ಹಾಸ್ಯಮಯವಾಗಿರುತ್ತವೆ ಎಂದರು.
ನವಜೋಡಿಗಳ ಮಧ್ಯೆ ಕಣ್ಣಿಗೆ ಬಟ್ಟೆ ಕಟ್ಟಿ, ವಸ್ತು ಪತ್ತೆಹಚ್ಚುವ ಆಟವನ್ನಾಡಿಸಿದಾಗ, ಅತ್ಯಂತ ಹುರುಪಿನಿಂದ ಪಾಲ್ಗೊಂಡ ಸಿನಿ ಜೋಡಿಗಳು, ಕಾರ್ಯಕ್ರಮವನ್ನು ಇನ್ನೂ ಹಾಸ್ಯಮಯವಾಗಿ ಮಾಡಿದರು. ಕಾರ್ಯಕ್ರಮದ ಮಧ್ಯೆ ಆಗಾಗ ಕುರಿ ಪ್ರತಾಪ್, ಪ್ರಿಯಾಂಕ ಕಾಮತ್ ಮತ್ತು ಸಂಗಡಿಗರು ಮಾಡುತ್ತಿದ್ದ ಹಾಸ್ಯ ನೋಡುಗರನ್ನು ರಂಜಿಸಿತು. ಚಿತ್ರನಟ, ನಿರ್ಮಾಪಕ ಡಾಲಿ ಧನಂಜಯ್ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಇನ್ನೆಲೆ, ವಾಸುಕಿ ಹಾಗೂ ನಾಗಭೂಷಣ್ ಶುಭಹಾರೈಸಿದರು.
ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಭಗ್ನಪ್ರೇವಿಗಳಿಗಾಗಿ ಯೋಗರಾಜ ಭಟ್ ಅವರು ಬರೆದ ಎರಡು ಸಾಲುಗಳು ಮನಮುಟ್ಟುವಂತಿದ್ದವು;
ಕರಗಿದ ಮೊಂಬತ್ತಿ ನಾನು ಕೊನೆಯಲ್ಲಿ ಹೇಳುವೆನು
ನನ್ನೊಳಗೆ ಅಡಗಿದ್ದ ದಾರವೇ ನನ್ನ ಕೊಲೆಯ ರುವಾರಿ
ಯಾರೂ ಬಾಳದಿರಿ ನನ್ನಂತೆ ಯಾಮಾರಿ ….!
ಈ ಸಾಲುಗಳಿಗೆ ನ್ಯಾಯ ಒದಗಿಸುವಂತೆ ಅಲ್ಲೇ ತಕ್ಷಣವೇ ಹಾಡಿದ್ದರು ವಾಸುಕಿ.