ಯಕ್ಷಗಾನ ಕಲಾವಿದನ ಮೇಲೆ ಹಲ್ಲೆ ಪ್ರಕರಣ: ಮಧ್ಯಂತರ ಜಾಮೀನು ಪಡೆದ ಆರೋಪಿಗಳು

ಯಕ್ಷಗಾನ ಕಲಾವಿದನ ಮೇಲೆ ಹಲ್ಲೆ ಪ್ರಕರಣ: ಮಧ್ಯಂತರ ಜಾಮೀನು ಪಡೆದ ಆರೋಪಿಗಳು

ಉಡುಪಿ: ಸಾಲ ತೀರಿಸುವ ವಿಚಾರಕ್ಕೆ ಯಕ್ಷಗಾನ ಕಲಾವಿದ ನಿತಿನ್ ಆಚಾರ್ಯ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳಾದ ಸಚಿನ್‌ ಅಮೀನ್‌ , ಅವರ ತಂದೆ ಕುಶಾಲ್‌ ಅಮೀನ್‌ ಮಧ್ಯಂತರ ಜಾಮೀನು ಪಡೆದಿದ್ದಾರೆ.

ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಪ್ರತಿ ದೂರು ದಾಖಲಾಗಿದೆ.ಸಚಿನ್‌ ಅಮೀನ್‌ ಅವರಿಂದ ಚಿನ್ನವನ್ನು ಪಡೆದು ಅದನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಅದಕ್ಕೆ ಸರಿಯಾಗಿ ಬಡ್ಡಿ ನೀಡದೆ ವಂಚನೆ ಮಾಡಿದ್ದಾರೆ ಎಂದು ಅವರಿಬ್ಬರು ಹಲ್ಲೆ ಮಾಡಿರುವುದಾಗಿ ಪಡುಬಿದ್ರಿ ಠಾಣೆಯಲ್ಲಿ ನಿತಿನ್‌ ಆಚಾರ್ಯ ದೂರು ದಾಖಲಿಸಿದ್ದರು.

ಈ ದೂರು ದಾಖಲಾಗುವ ಕೆಲವು ತಾಸಿನ ಮೊದಲು ಸಚಿನ್‌ ಅಮೀನ್‌ ಅವರ ತಾಯಿಯು ತನ್ನ ಮಗ ಸಚಿನ್‌ನಿಂದ ಪಡೆದ ಚಿನ್ನವನ್ನು ಹಿಂದುರಿಗಿಸದೆ ನಿತಿನ್‌ ಆಚಾರ್ಯ ಮೋಸ ಮಾಡಿದ್ದಾರೆ ಎಂದು ಕಾಪು ಠಾಣೆಯಲ್ಲಿ ದೂರು ನೀಡಿದ್ದರು ಎಂದು ಎಸ್‌ಪಿ ತಿಳಿಸಿದ್ದಾರೆ

ರಾಜ್ಯ