ಸುಳ್ಯ ಶಾಲೆಯಿಂದ ಮಗುವನ್ನು ಬೈಕಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಅಡ್ಡಬಂದ ರಿಕ್ಷಾ:ಡಿಕ್ಕಿಯಾದ ಬೈಕ್ ನಲ್ಲಿದ್ದ ಮಗುವಿನ ಕಾಲಿಗೆ ಗಾಯ: ರಿಕ್ಷಾ ಚಾಲಕನಿಗೆ ಮಗುವಿನ ತಂದೆಯಿಂದ ಹಲ್ಲೆ :

ಸುಳ್ಯ ಶಾಲೆಯಿಂದ ಮಗುವನ್ನು ಬೈಕಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಅಡ್ಡಬಂದ ರಿಕ್ಷಾ:ಡಿಕ್ಕಿಯಾದ ಬೈಕ್ ನಲ್ಲಿದ್ದ ಮಗುವಿನ ಕಾಲಿಗೆ ಗಾಯ: ರಿಕ್ಷಾ ಚಾಲಕನಿಗೆ ಮಗುವಿನ ತಂದೆಯಿಂದ ಹಲ್ಲೆ :

ಸುಳ್ಯ ಶಾಲೆಯಿಂದ ಮಗುವನ್ನು  ಬೈಕ್ ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಆಟೊ ರಿಕ್ಷಾ ಅಡ್ಡಬಂದ ಪರಿಣಾಮ ರಿಕ್ಷಾಕ್ಕೆ ಬೈಕ್ ಡಿಕ್ಕಿಯಾಗಿ ಬೈಕನಲ್ಲಿದ್ದ ಮಗುವಿಗೆ ಗಾಯವಾದ ಘಟನೆ ಮತ್ತು, ಮಗುವಿನ ತಂದೆ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿರುವ ಘಟನೆ ಅ.22 ರಂದು ನಡೆದಿದೆ.

ಸುಳ್ಯ ಜ್ಯೋತಿ ವೃತ್ತದ ಬಳಿ   ಸಂಜೆ ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಶಾಲಾ ವಿದ್ಯಾರ್ಥಿನಿಯ ಪಾದಕ್ಕೆ ಗಾಯವಾಗಿದ್ದು ಈ ವೇಳೆ ಸಿಟ್ಟಿಗೆದ್ದ ಬಾಲಕಿಯ ತಂದೆ ಆಟೋ ಚಾಲಕನಿಗೆ ಥಳಿಸಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿನಿಯ ತಂದೆ ಮತ್ತು ಆಟೋ ಚಾಲಕನ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿ ಕೈಕೈಮಿಲಾಯಿಸಿಕೊಂಡರು. ಹೊಡೆದಾಟದಲ್ಲಿ ಆಟೋ ಚಾಲಕನಿಗೆ ಮುಖಕ್ಕೆ ಗಾಯವಾಗಿ ಅವರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಬೈಕ್ ಚಾಲಕರ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.ಘಟನೆಯಿಂದ ಕಾಲಿಗೆ ಗಾಯವಾದ ವಿದ್ಯಾರ್ಥಿನಿಯನ್ನು ಕೆ ವಿ ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ

ರಾಜ್ಯ