ಹಾಲಿನ ಬೂತ್ ಎದುರಿಗಿದ್ದ ಜೋಡಿಸಿದ್ದ ಹಾಲಿನ ಕ್ರೇಟ್ ಗಳಿಗೆ ಪಿಕಪ್ ವಾಹನ ಡಿಕ್ಕಿ-  ದ್ವಿಚಕ್ರ ಮತ್ತು ಸೈಕಲ್ ಸವಾರರು ಪಾರು..!

ಹಾಲಿನ ಬೂತ್ ಎದುರಿಗಿದ್ದ ಜೋಡಿಸಿದ್ದ ಹಾಲಿನ ಕ್ರೇಟ್ ಗಳಿಗೆ ಪಿಕಪ್ ವಾಹನ ಡಿಕ್ಕಿ- ದ್ವಿಚಕ್ರ ಮತ್ತು ಸೈಕಲ್ ಸವಾರರು ಪಾರು..!

ಅತಿವೇಗವಾಗಿ ಬಂದ ಪಿಕಪ್ ವಾಹನ ಚಾಲಕನೊಬ್ಬ ಮಿಲ್ಕ್ ಬೂತ್‌ನ ಎದುರಿಗಿದ್ದ ಹಾಲಿನ ಕ್ರೇಟ್‌ ಗಳಿಗೆ ಡಿಕ್ಕಿ ಹೊಡೆದ ಘಟನೆ ಕಡಿಯಾಳಿಯಲ್ಲಿ ನಡೆದಿದ್ದು ಡಿಕ್ಕಿ ಹೊಡೆದು ಹೋದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ರಾಷ್ಟ್ರೀಯ ಹೆದ್ದಾರಿಯ ಮಿಲ್ಕ್ ಬೂತ್ ನ ಎದುರು ಹತ್ತಾರು ಹಾಲಿನ ಕ್ರೇಟ್ ಗಳನ್ನು ಜೋಡಿಸಿಡಲಾಗಿತ್ತು.ಈ ವೇಳೆ ದ್ವಿಚಕ್ರ ವಾಹನ ಸವಾರನನ್ನು ತಪ್ಪಿಸಲು ಹೋದ ಪಿಕಪ್ ವಾಹನ ಚಾಲಕ ,ನಿಯಂತ್ರಣ ತಪ್ಪಿ ನೇರವಾಗಿ ಹಾಲಿನ ಕ್ರೇಟ್ ಗಳಿದ್ದ ಕಡೆ ನುಗ್ಗಿದ್ದಾನೆ. ರಸ್ತೆಯಲ್ಲಿದ್ದ ಹಾಲು ಕ್ಷಣಾರ್ಧದಲ್ಲಿ ಚೆಲ್ಲಾಪಿಲ್ಲಿಯಾಗಿ ಸಾವಿರಾರು ರೂ. ನಷ್ಟ ಸಂಭವಿಸಿದೆ.

ಈ ಸಂದರ್ಭದಲ್ಲಿ ಸೈಕಲ್‌ ಮತ್ತು ದ್ವಿಚಕ್ರ ವಾಹನ ಸವಾರರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಅಪಘಾತದ ಭಯಾನಕ ದೃಶ್ಯ ಸಿಸಿಟಿಯಲ್ಲಿ ದಾಖಲಾಗಿದೆ.

ರಾಜ್ಯ