
ನ್ಯೂಸ್ ರೂಮ್ ಫಸ್ಟ್ : ವಾಟ್ಸಾಪ್ ಬಳಕೆದಾರರಿಗೆ ಇದು ಎಚ್ಚರಿಕೆಯ ಸುದ್ದಿ! ವಾಟ್ಸಾಪ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಸೈಬರ್ ಖದೀಮರು ಹೊಸ ದಾರಿಯೊಂದನ್ನು ಕಂಡುಕೊಂಡಿದ್ದಾರೆ.

ವಾಟ್ಸಾಪ್‌ನಲ್ಲಿ ಕಳೆದ ಕೆಲವು ದಿನಗಳಿಂದ ʼನ್ಯೂ ಪಿಂಕ್ ಲುಕ್ ವಾಟ್ಸಾಪ್ ವಿಥ್ ಎಕ್ಸಟ್ರಾ ಫೀಚರ್ಸ್ʼ ಎಂಬ ಲಿಂಕ್ ಹರಿದಾಡುತ್ತಿದೆ. ಇದರಲ್ಲಿ ಇನ್ಸ್‌ಸ್ಟಾಲೇಶನ್ ಲಿಂಕ್ ಇದ್ದು, ಪಿಂಕ್ ಥೀಮ್ ಇರುವ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಲಭ್ಯವಿದೆ ಎಂದು ತಿಳಿಸಲಾಗಿದೆ. ಅಪ್ಪಿ ತಪ್ಪಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆ್ಯಪ್ ಏನಾದರೂ ನೀವು ಡೌನ್‌ಲೋಡ್ ಮಾಡಿಕೊಂಡರೆ ಕತೆ ಮುಗೀತು. ಇದು ನಿಮ್ಮ ಒಟಿಪಿ, ಸಂಪರ್ಕ ಸಂಖ್ಯೆ, ಫೋಟೋಗಳು, ಬ್ಯಾಂಕ್ ಮಾಹಿತಿ ಸೇರಿದಂತೆ ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಡೇಟಾ ವನ್ನು ಕದಿಯಲಿದೆ. ಹಾಗಾಗಿ ಈ ನಿಟ್ಟಿನಲ್ಲಿ ಎಚ್ಚರದಿಂದ ಇರುವಂತೆ ಮುಂಬೈ ಪೊಲೀಸರು ಎಲ್ಲ ವಾಟ್ಸಾಪ್ ಬಳಕೆದಾರರಿಗೆ ನೀಡಿದ್ದಾರೆ.
ಏನಿದು ಪಿಂಕ್ ವಾಟ್ಸಾಪ್ ಸ್ಕ್ಯಾಮ್..?
‘ಪಿಂಕ್ ಕಲರ್ ವಾಟ್ಸಾಪ್ ಲೋಗೋ’ವನ್ನು ಅಪ್‌ಡೇಟ್ ಮಾಡಲು ಮತ್ತು ಪಡೆದುಕೊಳ್ಳಲು ಯುಆರ್‌ಎಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಂಬ ಫೇಕ್ ಲಿಂಕ್ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿದೆ. ವಾಟ್ಸಾಪ್ ಯಾವುದೇ ಪಿಂಕ್ ಲೋಗೋ ಬಿಡುಗಡೆ ಮಾಡಿಲ್ಲ. ಹಾಗಾಗಿ, ಈ ಫೇಕ್ ಲಿಂಕ್ ಫಿಶಿಂಗ್ ಲಿಂಕ್ ಆಗಿದೆ. ಒಂದೊಮ್ಮೆ ಬಳಕೆದಾರರು ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಅವರ ತಮ್ಮ ಫೋನ್ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳಲಿದ್ದಾರೆ. ಸೈಬರ್ ಖದೀಮರು ಮೊಬೈಲ್ ಹ್ಯಾಕ್ ಮಾಡಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೇಕ್ ಪಿಂಕ್ ವಾಟ್ಸಾಪ್ ಡೌನ್‌ಲೋಡ್ ಮಾಡಿಕೊಂಡಿದ್ದರೆ ಏನು ಮಾಡುವುದು..?
ಪಿಂಕ್ ವಾಟ್ಸಾಪ್ ಲೋಗೋ ಆಸೆಗೆ ಬಿದ್ದು ಈ ಫೇಕ್ ಲಿಂಕ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರೆ ಕೂಡಲೇ ಅದನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಯಾವುದೋ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಂತೆ ಮತ್ತು ಅಧಿಕೃತ ಪ್ಲೇ ಸ್ಟೋರ್‌ಗಳ ಹೊರತಾಗಿ ಬೇರೆ ಯಾವುದೇ ಆ್ಯಪ್ ಡೌನ್‌ಲೋಡ್ ಮಾಡದಂತೆ ಪೊಲೀಸರು ಬಳಕೆದಾರರಿಗೆ ಎಚ್ಚರಿಸಿದ್ದಾರೆ