ನಾಪತ್ತೆಯಾಗಿದ್ದ ವಿದ್ಯಾರ್ಥಿ ಅಂಕಿತ್ ನಾಯಕ್ ಬೆಂಗಳೂರಿನಲ್ಲಿ ಪತ್ತೆ.

ನಾಪತ್ತೆಯಾಗಿದ್ದ ವಿದ್ಯಾರ್ಥಿ ಅಂಕಿತ್ ನಾಯಕ್ ಬೆಂಗಳೂರಿನಲ್ಲಿ ಪತ್ತೆ.

ವಿಟ್ಲ: ನಾಪತ್ತೆಯಾಗಿದ್ದ ವಿದ್ಯಾರ್ಥಿ ಅಂಕಿತ್ ನಾಯಕ್ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಮಂಜೇಶ್ವರ ಠಾಣಾ ವ್ಯಾಪ್ತಿಯ ಅನಂತಗಿರಿಯ ಗೋಪಾಲ ನಾಯಕ್ ಎಂಬವರ ಪುತ್ರ ಅಡ್ಯನಡ್ಕ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್ ನಾಯಕ್ ನಾಪತ್ತೆಯಾಗಿದ್ದ.

ಭಾನುವಾರ ಸಂಜೆ ನೆರೆ ಮನೆಗೆ ಹೋಗಿ ಬರುತ್ತೇನೆಂದು ತಂದೆಯ ಹೊಂಡಾ ಅಕ್ವಿವಾ ಗಾಡಿಯನ್ನು ತೆಗೆದುಕೊಂಡು ಹೋದವ ಬಳಿಕ ಮನೆಗೆ ಬಾರದೇ ನಾಪತ್ತೆಯಾಗಿದ್ದ, ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನು ಬಾಲಕನ ಪತ್ತೆಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದರು.
ಸಧ್ಯ ಇದೀಗ ವಿದ್ಯಾರ್ಥಿ ಅಂಕಿತ್ ನಾಯಕ್ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ರಾಜ್ಯ