
ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ ಮತ್ತು ಜೆಡಿಎಸ್ ಕಾರ್ಯಕರ್ತರು ಮೇ 8 ರಂದು ರೋಡ್ ಶೋ ಮಾಡಿ ಮತ ಯಾಚನೆ ನಡೆಸಿದರು.

ಪೈಚಾರ್‌ನಿಂದ ಆರಂಭಗೊಂಡ ರೋಡ್ ಶೋ ಹಾಗೂ ಮತ ಯಾಚನೆ ನಗರದಾಧ್ಯಂತ ನಡೆಸಲಾಯಿತು.ಪೈಚಾರ್‌ನಿಂದ ಗಾಂಧಿನಗರದವರೆಗೆ ಪ್ರತೀ ಅಂಗಡಿಗಳಿಗೆ ಬೇಟಿ ನೀಡಿ ಮತದಾರರ ಬಳಿ ಮತ ಯಾಚನೆ ಮಾಡಿದರು ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್. ಪ್ರತಿಪಕ್ಷಗಳ ಕುರಿತು ನಾವು ಮಾತನಾಡುವುದಿಲ್ಲ ಎಲ್ಲೆಡೆ ಜೆಡಿಎಸ್ ಪರವಾದ ಅಲೆ ಇದೆ. ರಾಜ್ಯದಲ್ಲಿ ಜೆಡಿಎಸ್ ಸರಕಾರ ಬರಲಿದ್ದು,ಕುಮಾರ ಸ್ವಾಮಿ ಮುಖ್ಯ ಮಂತ್ರಿ ಸ್ಥಾನ ವನ್ನು ಅಲಂಕರಿಸಲಿದ್ದಾರೆ. ಈ ಹಿಂದೆ ರೈತರ ಸಾಲವನ್ನು ಮನ್ನಾ ಮಾಡಿದಂತಹ ಸರಕಾರ ವಿದ್ದರೆ ಅದು ಜೆಡಿಎಸ್ ಹಾಗಾಗಿ ಮತದಾರರು ಸುಳ್ಯದಲ್ಲಿಯೂ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.ಈಗಾಗಲೇ ದೇಶದೆಲ್ಲೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ರೋಸಿ ಹೋಗಿದ್ದಾರೆ.ಎಲ್ಲೆಡೆ ಬದಲಾವಣೆ ಬಯಸಿರುವ ಮತದಾರರು ಈ ಬಾರಿ ಜೆ ಡಿ ಎಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕನ್ಯಾಕುಮಾರಿ, ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ,ಜಿಲ್ಲಾಧ್ಯಕ್ಷ ಜಾಕೆ ಮಾದವ ಗೌಡ ತಾಲೋಕು ಉಪಾದ್ಯಕ್ಷ ಪ್ರವೀಣ್ ಮುಂಡೋಡಿ ಪ್ರಮುಖರಾದ ಮಂಜಪ್ಪ ರೈ, ಉದಯಕುಮಾರ್ ದೇರಪ್ಪಜ್ಜನಮನೆ, ಲೋಲಾಕ್ಷ ಕಾರಿಂಜ,ದೇವರಾಮ ಬಾಳೆಕಜೆ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ರೋಹನ್ ಪೀಟರ್, ಜ್ಯೋತಿ ಪ್ರೇಮಾನಂದ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಹಾಲಕ್ಷ್ಮಿ ಕೊರಂಬಡ್ಕ, ರಾಮಚಂದ್ರ ಬಳ್ಳಡ್ಕ, ಹಸೈನಾರ್ ಅಜ್ಜಾವರ ಸೇರಿದಂತೆ ಹಲವಾರು ಮಂದಿ ಕಾರ್ಯಕರ್ತರಿದ್ದರು.

