
ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಸುಳ್ಯ ಚನ್ನಕೇಶವ ಕೃಪಾ ಎಂಬಲ್ಲಿ ಎಪ್ರಿಲ್ 14ರಂದು 132ನೇ ವರ್ಷದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ವಹಿಸಿದ್ದರು. ನಿವೃತ್ತ ಅಂಚೆಪಾಲಕರಾದ ನಂದರಾಜ್ ಸಂಕೇಶ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ನಂತರ ಮುಗೇರ ಸಂಘದ ಸುಳ್ಯ ತಾಲೂಕು ಅಧ್ಯಕ್ಷರಾದ ಕರುಣಾಕರ ಮೇನಾಲ ಅಂಬೇಡ್ಕರ್ ಜಯಂತಿ ಕುರಿತು ಮಾತಾಡಿದರು ವೇದಿಕೆಯಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಜಿಲ್ಲಾ ಕಾರ್ಯದರ್ಶಿಯಾದ ಪರಮೇಶ್ವರ ಕೆಮ್ಮಿಂಜೆ ಮುಗೇರ ಸಂಘದ ಅಧ್ಯಕ್ಷರಾದ ಕರುಣಾಕರ ಮೇನಾಲ ನಿವೃತ್ತ ಅಂಚೆಪಾಲಕರಾದ ನಂದರಾಜ್ ಸಂಕೇಸ್ ರಮೇಶ ಕೊಡೆಂಕಿರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ನಂತರ ಅಂಬೇಡ್ಕರ್ ರಕ್ಷಣಾ ವೇದಿಕೆಯ ಸುಳ್ಯ ತಾಲೂಕು ಅಧ್ಯಕ್ಷರ ಆಯ್ಕೆ ಮಾಡಲಾಯಿತು ಸುಳ್ಯ ತಾಲೂಕು ಅಧ್ಯಕ್ಷರಾಗಿ ರಮೇಶ್ ಕೊಡಂಕಿರಿ ಸುಳ್ಯ ತಾಲೂಕು ಕಾರ್ಯದರ್ಶಿಯಾಗಿ ತೇಜಕುಮಾರ್ ಅರಮನೆ ಗಾಯ ಇವರಿಬ್ಬರನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ನವೀನ್ ಅರಮನೆ ಗಾಯ ಬಾಲಚಂದ್ರ ಅಡ್ಕಾರ್ ಅರಸು ರತ್ನ ನಾಗಪಟ್ಟಣ ಅಶೋಕ ನಾಗ ಪಟ್ಟಣ ಮುನಿಸ್ವಾಮಿ ನಾಗಪಟ್ಟಣ ರಾಜೇಶ ನಾಗಪಟ್ಟಣ ಜಗದೀಶ್ ನಾಗಪಟ್ಟಣ ಮೊದಲಾದವರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ನವೀನ್ ಅರಮನೆ ಗಾಯ ಎಂಬವರು ಈ ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.


