
ಸಂಪಾಜೆಯಲ್ಲಿ ಕಾರು ಮತ್ತು ಬಸ್ ನಡುವೆ ಅಪಘಾತ ಮೂರು ಮಕ್ಕಳು ಇಬ್ಬರು ಮಹಿಳೆ ಮತ್ತು ಒರ್ವ ಗಂಡಸು ಸೇರಿದಂತೆ ಒಟ್ಟು ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಎ.೧೪ ರಂದು ವರದಿಯಾಗಿದೆ ಮಡಿಕೇರಿ ಕಡೆಯಿಂದ ಬಂದ ಶಿಪ್ಟ್ ಕಾರು ಸಂಪಾಜೆ ಯಲ್ಲಿ ಸುಳ್ಯದಿಂದ ಮಡಿಕೇರಿಗೆ ಹೋಗುತ್ತಿದ್ದ ಕೆಸ್ ಆರ್ ಟಿ ಸಿ ಬಸ್ ಡಿಕ್ಕಿಯಾಗಿದೆ ಕಾರಿನಲ್ಲಿ ಒಟ್ಟು 8 ಮಂದಿ ಇದ್ದರು ಎಂದು ಹೇಳಲಾಗಿದೆ, ಒಬ್ಬ ಗಂಡಸು ಮತ್ತು ಮಗು ಗಂಭೀರ ಸ್ಥಿತಿಯಲ್ಲಿ ಸುಳ್ಯ ಕೆ ವಿ ಜಿ ಚಿಕಿತ್ಸೆ ಪಡೆಯುತ್ತಿದ್ದಾರೆ,ಕಾರಿನಲ್ಲಿದ್ದವರು ಮಂಡ್ಯ ಮೂಲದ ಮಳವಳ್ಳಿಯವರು ಎಂದು ಹೇಳಲಾಗಿದೆ, ಗುರುತು ಪತ್ತೆ ಇನ್ನೂ ಆಗಿಲ್ಲ
ಸಿರಾಜ್ ಮಹಮ್ಮದ್ ಉವೈಸ್, ಉಮ್ಮರ್ ತಾಜ್, ಸಂಪಾಜೆ ಪೋಲೀಸರು, ಸೇರಿದಂತೆ ಹಲವು ಯುವಕರು ರಕ್ಷಣಾ ಕಾರ್ಯದಲ್ಲಿ ತೊಡಗಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು ಮೃತಪಟ್ಟವರ ಮೃತದೇಹ ಸುಳ್ಯ ಸರಕಾರಿ ಆಸ್ಪತ್ರೆ ಹಾಗೂ ಕೆವಿಜಿ ಯಲ್ಲಿ ಇರಿಸಿದ್ದಾರೆ




