
ಸಂಪಾಜೆ ಅಪಘಾತದಲ್ಲಿ ಗಂಭೀರ ಸ್ಥಿತಿಯಲ್ಲಿ ಸುಳ್ಯ ಕೆ ವಿ ಜಿ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಹೆಸರು ಮಂಜುನಾಥ್(45) ಎಂದು ತಿಳಿದು ಬಂದಿದೆ ಮಂಡ್ಯ ಮೂಲದ ಮಳವಳ್ಳಿ ಬೀಮನ ಹಳ್ಳಿ ಮೂಲದ ಕುಮಾರ್( ಮಹದೇವ) ಪತ್ನಿ ಶೀಲಾ(29) ಎನ್ನುವವರು ತನ್ನ ಪುಟ್ಟ ಮಗು ಹಾಗೂ ಕುಮಾರ್ ರ ಇಬ್ಬರು ಅಕ್ಕನ ಮಕ್ಕಳು ಹಾಗೂ ತನ್ನ ಗೆಳೆಯ ಮಂಜುನಾಥ್ ಮತ್ತು ಮಕ್ಕಳೊಂದಿಗೆ ದ.ಕ ಪ್ರವಾಸಕ್ಕೆಂದು ಬಂದಿದ್ದರು ಎಂದು ತಿಳಿದುಬಂದಿದೆ.


ಕಾರು ಕುಮಾರ್ ಅವರದಾಗಿದ್ದು ಸ್ವತ್ಹ ಅವರೆ ಕಾರು ಚಲಾಯಿಸುತ್ತಿದ್ದರು ಎಂದು ಹೇಳಲಾಗಿದೆ.ಮಂಜುನಾಥ್ ಗಾಯಾಳಾಗಿದ್ದು ಅತನನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ , ಗಾಯ ಗೊಂಡ 4 ವರ್ಷದ ಮಗುವಿಗೆ ಸುಳ್ಯದಲ್ಲಿ ಚಿಕಿತ್ಸೆ ನಡೆಯುತ್ತಿದೆ.ಸುಳ್ಯ ಕೆ ವಿ ಜಿ ಆಸ್ಪತ್ರೆಗೆ ಕೊಡಗು ಎಸ್ಪಿ ರಾಮ್ ರಾಜನ್ ಭೇಟಿ ನೀಡಿ ಮಾಹಿತ ಕಲೆ ಹಾಕಿದ್ದಾರೆ, ಬಸ್ಸಿನಲ್ಲಿದ್ದವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಹೊರ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ