
ಬಂಟ್ವಾಳ: ದ್ವಿತೀಯ ಪಿಯುಸಿ ವಿದ್ಯಾರ್ಥಿನೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.9 ರಂದು ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಾಳ್ತಿಲದಲ್ಲಿ ನಡೆದಿದೆ.


ಬಾಳ್ತಿಲ ನಿವಾಸಿ ಶಿಕ್ಷಕರಾದ ಚಂದ್ರಶೇಖರ ಮತ್ತು ಸೌಮ್ಯ ಅವರ ಪುತ್ರಿ ವೈಷ್ಣವಿ (17) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ಇಂದಿನಿಂದ ಪರೀಕ್ಷೆ ಆರಂಭವಾಗುವ ಹಿನ್ನೆಲೆಯಲ್ಲಿ ವೈಷ್ಣವಿ ಮನೆಯಲ್ಲಿ ಪರೀಕ್ಷೆ ತಯಾರಿಯಲ್ಲಿದ್ದಳು. ಹಾಗಾಗಿ ಮಗಳು ಓದುತ್ತಿದ್ದಾಳಾ ಎಂದು ತಾಯಿ ಸೌಮ್ಯ ಅವರು ನೆರೆ ಮನೆಯವರಲ್ಲಿ ವಿಚಾರಿಸಲು ಪೋನ್ ಮಾಡಿದಾಗ ಮನೆ ಬಾಗಿಲು ಹಾಕಲಾಗಿತ್ತು. ನೆರೆಮನೆಯವರು ಮನೆಗೆ ಹೋಗಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದಿದೆ.
ಕಳೆದ ಕೆಲವು ದಿನಗಳಿಂದ ಇವಳು ಖಿನ್ನತೆ ಗೊಳಗಾಗಿದ್ದಳು, ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆ ಗೆ ಚಿಕಿತ್ಸೆ ನೀಡಲಾಗಿತ್ತು ಎಂದು ಹೇಳಲಾಗಿದೆ.
ಕಾಲೇಜಿನಲ್ಲಿ ಪ್ರಥಮ
ವೈಷ್ಣವಿ ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಿಯಾಗಿದ್ದು, ಕಲಿಕೆಯಲ್ಲಿ ಕ್ಲಾಸಿನಲ್ಲಿ ಪ್ರಥಮವಾಗಿದ್ದಳು.