ಸಾಲೆತ್ತೂರು ಲಾರಿ ಬೆಂಕಿಗೆ ಆಹುತಿ.

ಸಾಲೆತ್ತೂರು ಲಾರಿ ಬೆಂಕಿಗೆ ಆಹುತಿ.

ವಿಟ್ಲ: ಸಾಲೆತ್ತೂರು ಸಮೀಪದ ಮೆದು ಎಂಬಲ್ಲಿನ ಪೆಟ್ರೋಲ್ ಬಂಕ್ ಎದುರುಗಡೆ ನಿಲ್ಲಿಸಿದ್ದ ಭಾರೀ ಗಾತ್ರದ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಲಾರಿಯ ಮುಂದಿನ ಬಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದು ಅಪಾರ ನಷ್ಟ ಸಂಭವಿಸಿದೆ.
ಪೆಟ್ರೋಲ್ ಬಂಕಿನ ಎದುರು ಈ ಘಟನೆ ನಡೆದಿದ್ದು, ಈ ಸಂದರ್ಬದಲ್ಲಿ ಸ್ಥಳೀಯರು ಹರಸಾಹಸಪಟ್ಟು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಬಂಟ್ವಾಳ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದಾರೆ.
ಕಳೆದ 5 ತಿಂಗಳುಗಳ ಹಿಂದೆ ಈ ಹೊಸ ಲಾರಿಯನ್ನು ಖರೀದಿಸಿದ್ದಲ್ಲದೇ ಇವತ್ತು ಶೋರೂಮಿನಲ್ಲಿ ಸರ್ವೀಸ್ ನಡೆಸಿ ಬಂದಿರುವುದಾಗಿ ತಿಳಿದುಬಂದಿದೆ

ರಾಜ್ಯ