ಸುಳ್ಯದ ಬಾಲಕನ ಚಿಕಿತ್ಸೆಗೆ ನೆರವಾಗಿ ಸಹಕರಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಿದ ಗ್ಲೋಬಲ್ ಗೀವರ್ಸ್ ಚಾರಿಟೇಬಲ್ ಗ್ರೂಪ್.

ಸುಳ್ಯದ ಬಾಲಕನ ಚಿಕಿತ್ಸೆಗೆ ನೆರವಾಗಿ ಸಹಕರಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಿದ ಗ್ಲೋಬಲ್ ಗೀವರ್ಸ್ ಚಾರಿಟೇಬಲ್ ಗ್ರೂಪ್.


2 ದಿನಗಳಲ್ಲಿ48,33,960 ಸಂಗ್ರಹ.

ಸುಳ್ಯ ಎ ಪಿ ಎಂಸಿ ಬಳಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಗಣೇಶ್ ಮತ್ತು ಜ್ಯೋತಿ ದಂಪತಿಗಳ ಪುತ್ರ ರೋಟರಿ ಶಿಕ್ಷಣ ಸಂಸ್ಥೆಯ 6 ತರಗತಿಯ ೧೧ ವರ್ಷದ ತಶ್ಚಿತ್ ಎಂಬ ಬಾಲಕ ಲಿಂಪೋಮ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು ಆ ಮಗುವಿನ ಚಿಕಿತ್ಸೆಗಾಗಿ ಗ್ಲೋಬಲ್ ಗೀವರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಡಿಯೋ ಮೂಲಕ ವಿನಂತಿಸಿ ಕೊಂಡಾಗ ಸುಳ್ಯ ನಗರವಲ್ಲದೆ ಜಿಲ್ಲೆ ಮತ್ತು ಹೊರ ಜಿಲ್ಲೆ ರಾಜ್ಯ ಹೊರ ರಾಜ್ಯಗಳಿಂದ, ಅಲ್ಲದೆ ವಿದೇಶಗಳಿಂದಲೂ ಸಾವಿರಾರು ಮಂದಿ ಜಾತಿ ಮತ ಪಂಥ ಬೇದ ಮರೆತು ಸ್ಪಂದನೆ ನೀಡುವ ಮೂಲಕ ಕೇವಲ ಎರಡೇ ದಿನಗಳಲ್ಲಿ48,33,960 ರೂಪಾಯಿಗಳನ್ನು ಬಾಲಕನ ಪೋಷಕರ ಬ್ಯಾಂಕ್ ಖಾತೆಗೆ ನೀಡುವ ಮೂಲಕ ಚಿಕಿತ್ಸೆಗೆ ಸ್ಪಂದನೆ ನೀಡಿರುವಂತದ್ದು ಮನಷ್ಯಧರ್ಮದ ಜೀವಂತಿಕೆ ತೋರಿಸುವಂತದ್ದು ಎಂದು ಟ್ರಸ್ಟಿನ ಅಧ್ಯಕ್ಷ ಶಹಝಹಾನ್ ನಿಲಂಬೂರು ತಿಳಿಸಿದ್ದಾರೆ.ಜನತೆಯ ಈ ರೀತಿಯ ಸ್ಪಂದನೆಯು ಇಂದು ಒಂದು ಬಾಲಕನ ಜೀವ ರಕ್ಷಣೆಗೆ ಸಾಕ್ಷಿಯಾಗಿದೆ. ನಮ್ಮ ಟ್ರಸ್ಟ್ ಮೂಲಕ ಈ ಹಿಂದೆಯೂ ಕೇರಳ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ವಿವಿಧ ಕಷ್ಟಗಳಿಂದ ಬಳಲುತ್ತಿದ್ದವರಿಗೆ ನೆರವು ನೀಡಿದ್ದೇವೆ.ರೋಗಿಗಳ ನೆರವಿಗಾಗಿ ಟ್ರಸ್ಟ್ ವತಿಯಿಂದ ವಿಡಿಯೋ ಮಾಡಿ ಪ್ರಸಾರ ಪಡಿಸಿದಾಗ ಜನತೆಯ ಸ್ಪಂದನೆ ನೀಡಿರುವದಕ್ಕೆ ಸರ್ವ ಜನತೆಗೆ ಕೃತಜ್ಞತೆ ಸಲ್ಲಿಸುತ್ತಿದೇವೆ ಎಂದರು ಇದರಿಂದಾಗಿ
ಕಷ್ಟದಲ್ಲಿರುವ ರೋಗಿಗಳಿಗೆ ನೆರವಾಗಲು ನಮ್ಮಿಂದ
ಸಾಧ್ಯವಾಗುತ್ತಿದೆ ಎಂದರು ಗ್ಲೋಬಲ್ ಟ್ರಸ್ಟ್‌ನ ಸಂಯೋಜಕರಾದ ಜಾಬಿರ್ ನಿಝಾಮಿ ಮಾತನಾಡಿ ಗ್ಲೋಬಲ್ ಟ್ರಸ್ಟ್‌ನ ಮೂಲಕ ಈ ರೀತಿ ವೀಡಿಯೋ ಮೂಲಕ ಮನವಿ ಮಾಡಿ ಕರ್ನಾಟಕದಲ್ಲಿ ಒಟ್ಟು 19 ಮಂದಿಗೆ ಚಿಕಿತ್ಸಾ ನೆರವು ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಮಂದಿಗೆ ಈ ರೀತಿ ಚಿಕಿತ್ಸಾ ನೆರವು ಸಂಗ್ರಹಿಸಿ ನೀಡಲಾಗಿದೆ ಎಂದು ವಿವರಿಸಿದರು
ಇದಕ್ಕಾಗಿ ಸುಳ್ಯದ ತಂಡವೂ ಹಗಲಿರುಳು ಶ್ರಮಿಸಿದೆ
ಆರೋಗ್ಯಕ್ಕೆ ಮತ್ತು ಹಸಿವಿಗೆ ಇಷ್ಟೊಂದು ಮಹತ್ವ
ಇರುವಾಗ ಇಲ್ಲಿ ಯಾವುದೇ ಜಾತಿ ಧರ್ಮದ
ಅಂತರವಿರುವುದಿಲ್ಲ. ಕೇವಲ ಮನುಷ್ಯತ್ವಕ್ಕೆ ಮಾತ್ರ ಬೆಲೆ ಇರುತ್ತದೆ ಎಂದು ಹೇಳಿದ ಅವರು, ಇಂದು ರಾಜ್ಯ, ಅಂತರ್ ರಾಜ್ಯ ,ವಿದೇಶಗಳಿಂದಲೂ ಸರ್ವ ಜನತೆ ಬಾಲಕನ ಚಿಕಿತ್ಸೆಗೆಯಶಸ್ವಿ ಸ್ಪಂದನೆಯನ್ನು ನೀಡಿದ್ದಾರೆ. ಸಹಕರಿಸಿದ ಸರ್ವರನ್ನು ನಮ್ಮ ಸಮಿತಿ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ತಶ್ವಿತ್ ಚಿಕಿತ್ಸೆ ಸಲಹಾ ಸಮಿತಿ ಅಧ್ಯಕ್ಷ ಗೋಕುಲ್ ದಾಸ್, ಸುಳ್ಯ ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್, ಎಂ ವೆಂಕಪ್ಪಗೌಡ, ಗಾಂಧಿನಗರ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫ,ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯದರ್ಶಿ ಅನಿಲ್ ಮಲಪುರಂ, ಹಿರಿಯರಾದ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು ಬಶೀರ್ ಈಶ್ವರಮಂಗಲ , ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.

ರಾಜ್ಯ