ವಿಧಾನಸಭಾ ಚುನಾವಣೆ – 2023 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.

ವಿಧಾನಸಭಾ ಚುನಾವಣೆ – 2023 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿಯಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ.


ಎಸ್ ಡಿ ಪಿ ಐ ಪಕ್ಷದ ಚುನಾವಣಾ ತಯಾರಿ ಬಿರುಸಿನಿಂದ ಆರಂಭ ಮಾಡಿದ್ದು ರಾಜ್ಯದ 54 ಕ್ಷೇತ್ರಗಳಿಗೆ ಅಭ್ಯರ್ಥಿಆಯ್ಕೆ ಪ್ರಕ್ರಿಯೆ ನಡೆದು ಅಂತಿಮಗೊಂಡಿದೆ,ಇದರಲ್ಲಿ ಮೊದಲ ಹಂತವಾಗಿ 10 ಅಭ್ಯರ್ಥಿಗಳ ಪಟ್ಟಿಯನ್ನು ಮೊದಲ ಹಂತವಾಗಿ ಬಿಡುಗಡೆ ಮಾಡಿದೆ ದಕ್ಷಿಣ ಕನ್ನಡ, ಉಡುಪಿ ಕೊಡಗು, ಮೈಸೂರು ,ಬೆಂಗಳೂರು, ದಾವಣಗೆರೆ ಮೊದಲಾದ ಕಡೆ ರಾಷ್ಟ್ರೀಯ ಪಕ್ಷಗಳಿಗೆ ತೀವ್ರ ಪೈಪೋಟಿ ನಡೆಸುವ ಹಿನ್ನಲೆಯಲ್ಲಿ ಚುನಾವಣಾ ತಯಾರಿಯಲ್ಲಿ ಎಸ್ ಡಿ ಪಿ ಐ ಚುರುಕಾಗಿದ್ದು, ಮೊದಲ ಹಂತವಾಗಿ
ಅಬ್ದುಲ್ ಮಜೀದ್ ಕೆ.ಎಚ್.ನರಸಿಂಹರಾಜ (ಮೈಸೂರು) ಬಿ.ಆರ್. ಭಾಸ್ಕರ್ ಪ್ರಸಾದ್ . ಪುಲಕೇಶಿನಗರ (ಪ. ಜಾ) (ಬೆಂಗಳೂರು)
ಅಬ್ದುಲ್ ಹನ್ಮಾನ್ ಸರ್ವಜನಗರ (ಬೆಂಗಳೂರು)
ಇಲ್ಯಾಸ್ ಮೊಹಮ್ಮದ್ ಬಂಟ್ವಾಳ (ದಕ್ಷಿಣ ಕನ್ನಡ)
ಅಲ್ಫಾನ್ಸ್ ಫ್ರಾಂಕೋ ಮೂಡಬಿದರಿ (ದಕ್ಷಿಣ ಕನ್ನಡ)
ಅಕ್ಷರ್ ಬೆಳ್ತಂಗಡಿ ಬೆಳ್ತಂಗಡಿ (ದಕ್ಷಿಣ ಕನ್ನಡ)
ಹನೀಫ್ ಮೂಲೂರ್ ಕಾಪು (ಉಡುಪಿ)
ಇಸ್ಟೈಲ್ ಝಬಿವುಲ್ಲಾ ದಾವಣಗೆರೆ ದಕ್ಷಿಣ (ದಾವಣಗೆರೆ)
ಬಾಳೆಕಾಯಿ ಶ್ರೀನಿವಾಸ್ ಚಿತ್ರದುರ್ಗ (ಚಿತ್ರದುರ್ಗ) ನಜೀರ್‌ ಖಾನ್ ವಿಜಯನಗರ (ವಿಜಯನಗರ) ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದೆ ಉಳಿದಂತೆ ಮೀಸಲು ಕ್ಷೇತ್ರವಾದ ಸುಳ್ಯಕ್ಕೆ- ಸಂಭವ್ಯ ಅಭ್ಯರ್ಥಿ – ಆನಂದ ಮಿತ್ತಬೈಲು ಪುತ್ತೂರಿಗೆ ಶಾಫಿ ಬೆಳ್ಳಾರೆ ಅಥವಾ ಇಕ್ಬಾಲ್ ಬೆಳ್ಳಾರೆ ಸ್ಪರ್ದಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ ಉಳ್ಳಾಲ ಕ್ಷೇತ್ರಕ್ಕೆ ತಾಂಟ್ರೆ ಬಾ ತಾಂಟ್ ಖ್ಯಾತಿಯ ರಿಯಾಸ್ ಫರಂಗಿಪೇಟೆ ಸ್ಪರ್ಧಿಸುವ ಸಾಧ್ಯತೆ ಎಂದು ಮೂಲಗಳು ತಳಿಸಿವೆ

ರಾಜ್ಯ