
ಸುಳ್ಯ:ಕೆ.ವಿ.ಜಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಇತ್ತೀಚೆಗೆ ಸುಳ್ಯ ಸಮೀಪದ ಅರಂಬೂರಿನಲ್ಲಿ ಬೈಕ್ ಅಪಘಾತದಲ್ಲಿ ನಿಧನ ಹೊಂದಿದ್ದ ಕೆ.ವಿ.ಜಿ ಐ.ಟಿ.ಐ ವಿದ್ಯಾರ್ಥಿ ಪ್ರತೀಕ್ ಅವರ ಮನೆಯವರಿಗೆ ಆರ್ಥಿಕ ನೆರವು ಹಸ್ತಾಂತರ ಮಾಡಲಾಯಿತು.ಸಂಘದ ಅಧ್ಯಕ್ಷರು ಹಾಗು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರು ಕೆ.ವಿ.ಜಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ನೀಡುವ ಮರಣ ಸಾಂತ್ವನ ನಿಧಿ ಸೌಲಭ್ಯದ ಬಾಬ್ತು ರೂ. 25 ಸಾವಿರ ಚೆಕ್‌ನ್ನು ವಿತರಿಸಿದರು.ಅಧ್ಯಕ್ಷರ ಆಡಳಿತ ಕಛೇರಿಯಿಂದ ಮೃತ ವಿದ್ಯಾರ್ಥಿಯ ತಂದೆ ತೇಜೇಶ್ವರ ಅವರಿಗೆ ಆರ್ಥಿಕ ಸಹಾಯದ ಚೆಕ್‌ನ್ನು ಹಸ್ತಾಂತರ ಮಾಡಲಾಯಿತು.

