
“ನಾನು ಅದು ಮತ್ತು ಸರೋಜ”
ಹೆಸರೇ ಸೂಚಿಸುವಂತೆ” ಅದು” ಇಲ್ಲಿ ಯಾವುದು ಎನ್ನುವುದೇ ಕುತೂಹಲ, ಲೂಸ್ ಮಾದ ಯೋಗಿ ,ಅಪೂರ್ವ, ದತ್ತಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ಇಂದು ಇದರ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಪ್ರತಿಷ್ಠಿತ ಎಂ .ಎಂ.ಲೆಗ್ಸಿ ಸಭಾಂಗಣದಲ್ಲಿ ನಡೆಯಿತು. ಬೆಂಗಳೂರು ಹೇಳಿ ಕೇಳಿ ಮಾಯಾ ನಗರಿ ..ಇಲ್ಲಿ ಅದೆಷ್ಟೋ ಸಿನಿಮಾಗಳು ಟ್ರೈಲರ್ ದಿನ ಪ್ರತೀ ಬಿಡುಗಡೆ ಯಾಗ್ತದೆ..ಆದರೆ ಇಂದು ಬಿಡುಗಡೆಯಾದ ಸಿನಿಮಾ ಮಾತ್ರ ಸುಳ್ಯಕ್ಕೆ ಬಹು ಹತ್ತಿರವಿದೆ..ಹೌದು ಸುಳ್ಯದ ಏನೆಕಲ್ಲು ಗ್ರಾಮದ ಅಮೈ ಮನೆ ವಿನಯ್ ಪ್ರೀತಂ ನಿರ್ದೇಶನ ಮಾಡಿರುವ , ಅವರ ಬಹು ನಿರೀಕ್ಷಿತ ಚಿತ್ರ..ನಾನು ಅದು ಮತ್ತು ಸರೋಜ.. ಈ ಹಿಂದೆ ಮಡಮಕ್ಕಿ ಚಿತ್ರ ನಿರ್ದೇಶನ ಮಾಡಿ ಕನ್ನಡ ಸಿನಿಮಾದ ಯಶಸ್ವಿ ಯುವ


ನಿರ್ದೇಶಕರಾಗಿ ಮಿಂಚಿದ್ದರು, ಆ ಚಿತ್ರ ದಲ್ಲಿ ನಟಿ ತಾರಾ ಸೇರಿದಂತೆ ಹಲವು ಹಿರಿಯ ಕಿರಿಯ ಕಲಾವಿದರು ಆ ತಂಡ ದಲ್ಲಿ ಕೆಲಸ ಮಾಡಿತ್ತು ಚಿತ್ರ ಯಶಸ್ವಿ ಪ್ರದರ್ಶನ ಕಂಡಿತ್ತು ಇದೀಗ ನಾನು ಅದು ಮತ್ತು ಸರೂಜ ಶೂಟಿಂಗ್ ಪೂರ್ಣವಾಗಿದ್ದು, ಡಿ. 30 ರಂದು ರಾಜ್ಯದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.ಸಂಪೂರ್ಣ ಸಸ್ಪೆನ್ಸ್, ಹಾಸ್ಯ, ಥ್ರಿಲರ್ ಕಥೆಯಾಗಿದ್ದು ಸಿನಿಮಾ ಪ್ರೇಮಿಗಳಿಗೆ ರಸದೌತಣ ನೀಡಲಿದೆ.ಬೆಂಗಳೂರಿನಲ್ಲಿ ಸಿನಿಮಾರಂಗದಲ್ಲಿ ಕಳೆದ ಇಪ್ಪತ್ತು ವರುಷಗಳಿಂದ ಗುರುತಿಸಿಕೊಂಡಿರುವ ವಿನಯ್ ಪ್ರೀತಮ್ ಕೈಯಲ್ಲಿ ನಿರ್ದೇಶನದ ಚಾಕಚಕ್ಯತೆಗೆ ಹಲವು ಸಿನಿಮಾ ರಂಗದ ದಿಗ್ಗಜರು ಬೆರಗಾಗಿದ್ದಾರೆ ಎನ್ನುವುದು ಸತ್ಯ…

