
ಸಂಪಾಜೆಯಿಂದ ಆಕ್ರಮಿಸಿ ಬರುತ್ತಿರುವ ಅಡಿಕೆ ಎಲೆ ಹಳದಿರೋಗ ಮತ್ತು ಎಲೆ ಚುಕ್ಕಿ ರೋಗಕ್ಕೆ ಕಂಗಾಲಾಗಿರುವ ಸುಳ್ಯ ಬಾಗದ ಅಡಿಕೆ ಬೆಳೆಗಾರರು ಪಕ್ಷಾತೀತ ವಾಗಿ ಒಂದು ಸಂಘಟನೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿವಿಧ ಪದಾದಿಕಾರಿಗಳು ರಚಿಸಿಕೊಂಡು, ಈ ಭಾಗದ ರೈತರ ದ್ವನಿಯಾಗಬೇಕೆಂದು ಸರಕಾರ ಮಟ್ಟದಲ್ಲಿ ರಾಜ್ಯದ ಅಡಿಕೆ ಬೆಳೆಗಾರರ ರಕ್ಷಣೆಗೆ ಧರ್ಮಸ್ಥಳ ಡಾ. ವಿರೇಂದ್ರ ಹೆಗ್ಗಡೆಯವರಿ ಮನವಿಯನ್ನು ಸುಮಾರು ಹತ್ತು ಸಾವಿರ ರೈತರನ್ನು ಸೇರಿಸಿ ಸುಳ್ಯದಲ್ಲಿ ಪೂಜ್ಯ ಖಾವಂದರಿಗೆ ನೀಡಲಾಗುವುದ ಎಂದು ಅಡಿಕೆ ಹಳದಿ ರೋಗ ಪೀಡಿತ ನೊಂದ ಕೃಷಿಕರೂ ಆಗಿರುವ ,ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಚಾಲರಾದ ಭವಾನಿ ಶಂಕರ ಅಡ್ತಲೆ , ಎಂ ವೆಂಕಪ್ಪ ಗೌಡ, ಎನ್ ಎ ರಾಮಚಂದ್ರ, ದೀಪಕ್ ಕುತ್ತಮೊಟ್ಟೆ ಮೊದಲಾದವರು ತಿಳಿಸಿದ್ದಾರೆ, ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೊಸ್ಟಿ ನಡೆಸಿ ಮಾತನಾಡಿದ ಅವರು,
ಕರ್ನಾಟಕ ರಾಜ್ಯದ, ದ.ಕ. ಜಿಲ್ಲೆಯ ಹಾಗೂ ಕೊಡಗಿನ ಕೆಲ ಪ್ರದೇಶ ಸೇರಿದಂತೆ ಈ ಭಾಗದ ಜನರು;

ಮೂಲ ಬೆಳೆಯನ್ನಾಗಿ ಅಡಿಕೆಯನ್ನು ಬೆಳೆಯುತ್ತಿದ್ದಾರೆ. ಸರಿ ಸುಮಾರು 30 ವರ್ಷಗಳ ಹಿಂದೆಯೇ ಅಡಿಕೆ ಕೃಷಿಗೆ
‘ಹಳದಿ ರೋಗ’ ಎಂಬ ಮಾರಕ ರೋಗ ತಗುಲಿದ್ದು, ಈ ಬಗ್ಗೆ ಇಲ್ಲಿಯವರೇಗೆ ರೋಗದ ಕಾರಣವಾಗಲಿ, ಅದಕ್ಕೆ
ಬೇಕಾದ ಔಷಧಿಯನ್ನು ಕಂಡುಹಿಡಿಯಲು ಭಾರತೀಯ ವಿಜ್ಞಾನಿಗಳಿಗೆ ಸಾಧ್ಯವಾಗಲಿಲ್ಲ. ಅಥವಾ ಸರಕಾರ ಈ
ವಿಚಾರವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಅನ್ನುವುದೇ ವಿಪರ್ಯಾಸ. ಈ ರೋಗ ತಗುಲಿದ ಅಡಿಕೆ ತೋಟವು

ಸಂಪೂರ್ಣ ನಾಶವಾಗಿ ಮತ್ತೆ ಅಡಿಕೆ ಕೃಷಿ ಬೆಳೆಯಲಾಗುತ್ತಿಲ್ಲ ,ವರ್ಷಕ್ಕೆ ಹತ್ತು ಹದಿನೈದು ಲಕ್ಷ ಆದಾಯ ತರುತ್ತಿದ್ದ ತೋಟಗಳು ಇವತ್ತು ಒಂದು ರೂಪಾಯಿಯ ಆದಾಯವು ಇಲ್ಲದಾಗಿದೆ.
ಆದರೆ ಅಡಿಕೆ ಬೆಳೆಯನ್ನು ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದ ಮತ್ತು ಅದರ ಆಧಾರವಾಗಿ ವಾಣಿಜ್ಯ
ಬ್ಯಾಂಕ್‌ಗಳಲ್ಲಿ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದ ರೈತರು ಅತ್ತ ಸಾಲ ಕಟ್ಟಲಾಗದೆ, ಇತ್ತ ಜೀವನ
ಸಾಗಿಸಲು ಕಷ್ಟಪಡಬೇಕಾದ ದಿನಗಳು ಬಂದಿದೆ. ಈ ರೋಗದ ಲಕ್ಷಣಗಳು ಈಗ ಕೊಡಗು ಸಂಪಾಜೆಯಿಂದ ಆರಂಭವಾಗಿ ದಕ್ಷಿಣ ಕನ್ನಡ ಸಂಪಾಜೆ, ಅರಂತೋಡು, ತೊಡಿಕಾನ ಮತ್ತು ಮರ್ಕಂಜ ಗ್ರಾಮಗಳು ಸಂಪೂರ್ಣ ನಾಶವಾಗಿ, ಅಲ್ಲದೆ ಇದು ಈಗಾಗಲೇ
ವಿಸ್ತರಿಸುತ್ತಾ ಬಂದು ಪೂರ್ವ ಭಾಗದ ಮಡಪ್ಪಾಡಿ, ಎಲಿಮಲೆ, ಗುತ್ತಿಗಾರು ಕಡೆಗೂ ಈ ಕಡೆ
ಪಶ್ಚಿಮಾಭಿಮುಖವಾಗಿ ಆಲೆಟ್ಟಿ, ಅಜ್ಜಾವರ, ಕೇರಳದ ಕಲ್ಲಪಳ್ಳಿ ಕಡೆಗೂ ಹಾಗೇ ದಕ್ಷಿಣದ ಜಾಲ್ಸೂರು, ಕನಕಮಜಲು,ಸೋಣಂಗೇರಿಯ ವರೆಗೂ ವಿಸ್ತರಿಸುತ್ತಿದೆ. ಹೀಗಾದಲ್ಲಿ ಇನ್ನು ಕೆಲವೇ ವರ್ಷದಲ್ಲಿ ಸುಳ್ಯ ತಾಲೂಕಿನ 23 ಗ್ರಾಮಗಳಿಗೂ, ಕೇರಳದ ಒಂದಷ್ಟು ಭಾಗಕ್ಕೂ ಹಳದಿ ರೋಗ ತಗುಲಿ ಸಂಪೂರ್ಣ ವಿನಾಶದತ್ತ ಸಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿಯವರೆಗೆ ಹಲವು ಬಾರಿ ಜನಪ್ರತಿನಿಧಿಗಳ ಮೂಲಕ, ರೈತರ ಪರವಾಗಿದ್ದ ಕ್ಯಾಂಸ್ಕೋದಂತ ಸಂಸ್ಥೆಗಳ ಮೂಲಕ ಎಲ್ಲಾ ಸ್ತರದ ಜನಪ್ರತಿನಿಧಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಮುಟ್ಟಿಸುವ ಪ್ರಯತ್ನಪಟ್ಟರೂ

ಯಾವುದೇ ಪ್ರಯೋಜನ ಕಾಣಲಿಲ್ಲ. ಈ ಭಾಗದ ಜನಪ್ರತಿನಿಧಿಗಳು ಸರಕಾರದ ಗಮನ ಸೆಳೆಯಲು ಒಂದು ಹಂತದಲ್ಲಿ ವಿಫಲ ಎಂದೇ ಹೇಳಬಹುದು, ಕೃಷಿಕರು ಕೃಷಿ ಸಾಲ, ಅಲ್ಪಾವಧಿ, ದೀರ್ಘಾವಧಿ ಸಾಲಗಳು, ಮನೆ ಸಾಲ, ಶಿಕ್ಷಣ ಸಾಲ, ಚಿನ್ನಾಭರಣ ಈಡಿನ ಸಾಲ, ವಿವಾಹ ಪ್ರಯುಕ್ತ ಸಾಲ, ವಾಹನ ಖರೀದಿ ಸಾಲ ಹೀಗೆ ಸಾಲ ಮಾಡಿಕೊಂಡಿದ್ದು ಈಗ ಅತಂತ್ರ ಸ್ಥಿತಿಗೆ ತಲುಪಿ ಆತ್ಮಹತ್ಯೆಯಂತಹ ಪರಿಹಾರವನ್ನು ಕಾಣಲು ಮುಂದಾಗಿದ್ದಾರೆ. ಆದುದರಿಂದ ನೊಂದ ಕೃಷಿಕರೆಲ್ಲ ಒಂದಾಗಿ ಇನ್ನುಳಿದ ಆಶಾಕಿರಣವಾಗಿರುವ ಪರಮ ಪೂಜ್ಯ ಡಾ. ವಿರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಾವು

ಸಂಘಟಕರಾಗಿ, ಸಾಮೂಹಿಕ ಸರ್ವನಾಶವಾಗುವ ಮೊದಲು ನಮ್ಮ ಕೂಗನ್ನು ಸರಕಾರಕ್ಕೆ ಮುಟ್ಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಮಾಜದ ಮುಖ್ಯಸ್ಥರು, ಸೇರಿಕೊಂಡು ಪೂಜ್ಯರನ್ನು ಭೇಟಿ ಮಾಡಿದಾಗ ತನ್ನ ಸಂಪೂರ್ಣ ಸಹಕಾರ ಕೊಡುವುದಾಗಿ ಭರವಸೆ ನೀಡಿರುತ್ತಾರೆ. ಹಾಗಾಗಿ ಈಗಾಗಲೇ ರೋಗ ಪೀಡಿತ ಪ್ರದೇಶದ ಕೃಷಿಕರು ಮತ್ತು
ಈ ಬಗ್ಗೆ ಆತಂಕ ಹೊಂದಿರುವ ಕೃಷಿಕರೆಲ್ಲರೂ ಸಂಘಟಿತರಾಗಿ, ರಾಜಕೀಯ ರಹಿತರಾಗಿ, ಬದುಕುವುದಕ್ಕಾಗಿ ಎಚ್ಚೆತ್ತು, ಪ್ರಜ್ಞಾವಂತರಾಗಿ ಹೋರಾಟ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ರಾಜಕೀಯ ರಹಿತ ಹೋರಾಟ ಸಮಿತಿಯನ್ನು
ಮಾಡಿಕೊಂಡು, ಎಲ್ಲ ಸಮಾಜದ ಗಣ್ಯರನ್ನು ಸೇರಿಸಿ, ದೊಡ್ಡ ಮಟ್ಟದ ಸಮಾವೇಶ ಮಾಡಿ, ಹಳದಿ ರೋಗ ಪೀಡಿತ ಜಮೀನಿನಲ್ಲಿ ಪರ್ಯಾಯ ಕೃಷಿ ಮಾಡುವರೇ ಪರಿಹಾರ ಧನವನ್ನು ಎಕ್ರೆ 1ಕ್ಕೆ 5.00ಲಕ್ಷ ಮೊತ್ತದಷ್ಟು ಮತ್ತು ದೀರ್ಘಾವಧಿ ಸಾಲಗಳನ್ನು ಕನಿಷ್ಟ 10 ವರ್ಷಗಳ ಕಾಲ ಬಡ್ಡಿ ರಹಿತವಾಗಿ ಮುಂದೂಡುವರೇ ನಮ್ಮ ಬೇಡಿಕೆಯನ್ನು ಪೂಜ್ಯ ಹೆಗ್ಗಡೆಯವರ ಮೂಲಕ ಸರಕಾರಕ್ಕೆ ಮುಟ್ಟುವಂತೆ ಮಾಡಿ, ಸೂಕ್ತ ಪರಿಹಾರ ಕಂಡುಕೊಳ್ಳ ಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಕರಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಕ್ರೂಡೀಕರಿಸಲು ಆಯಾ ಗ್ರಾಮ/ವಲಯದಲ್ಲಿ
ಸಭೆಯನ್ನು ಕರೆದು ವಿವಿಧ ಸಮಿತಿಗಳನ್ನು ಮಾಡಬೇಕಾಗಿದೆ. ಆದುದರಿಂದ ಗ್ರಾಮದ ಎಲ್ಲಾ ರೈತರು ಈ ಸಭೆಗೆ ಆಗಮಿಸಿ ಬೃಹತ್
ಕಾರ್ಯಕ್ರಮ ಯಶಸ್ವಿಯಾಗಿ ರೈತರಿಗೆ ನ್ಯಾಯ ಸಿಗುವಂತಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಧ.ಯೋಜನಾಧಿಕಾರಿ ನಾಗೇಶ ಪಿ, ಸಂಚಾಲಕ ದಿನೇಶ್ ಮಡಪ್ಪಾಡಿ ಮೊದಲಾದವರಿದದ್ದರು.