
ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಮೂವರು ಸದಸ್ಯರು ರಾಜಿನಾಮೆ ನ.24 ರಂದು ನೀಡಿದ್ದು , ನಂತರ ಡಿ.5 ರಂದು ರಾಜಿನಾಮೆ ವಾಪಾಸು ಪಡೆಯಲಾಗಿತ್ತು.ಆದರೂ ಉದ್ದೇಶ ಪೂರಕವಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರು 3 ಮಂದಿ ಸದಸ್ಯರ ರಾಜಿನಾಮೆಯನ್ನು ಅಂಗೀಕಾರಮಾಡಿದ್ದಾರೆ, ಇದರ ಹಿಂದೆ ನ್ನನ್ನನ್ನು ಒಬ್ಬಂಟಿಯನ್ನಾಗಿಸಿ ಮಣಿಸುವ ತಂತ್ರವಿದೆ, ಇದಕ್ಕೆಲ್ಲ ಮಣಿಯುವ ವ್ಯಕ್ತಿ ನಾನಲ್ಲ ಪಕ್ಷದಲ್ಲಿ ಇದ್ದುಕೊಂಡೆ ಇದನ್ನು ಎದುರಿಸುತ್ತೇನೆ ಮುಂದಿನ ದಿನಗಳಲ್ಲಿ ಪಂಚಾಯತ್ ಬ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇನೆ, ನನ್ನ ಸದಸ್ಯರ ರಾಜೀನಾಮೆ ಅಂಗೀಕಾರದಲ್ಲಿ ನಿಯಮ ಪ್ರಕಾರ ನಡೆದಿಲ್ಲ ಇದರ ವಿರುದ್ದ ಕಾನೂನು ಸಮರ ನಡೆಸುತ್ತೇವೆ ಎಂದು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರು ಹೇಳಿದ್ದಾರೆ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ಸೋಮಶೇಖರ ಕೊಯಿಂಗಾಜೆ ನಾನು ಪಂಚಾಯತ್ ಅಧ್ಯಕ್ಷರ ಹಾಗೂ ಕೆಲವು ಸದಸ್ಯರ ನಡತೆ ಸರಿ ಇಲ್ಲದೆ ನ್ನನ್ನ ಗಮನಕ್ಕೆ ಬಂದು ರಾಜಿನಾಮೆ ನೀಡಿದ್ದೆ ನಾನು ರಾಜಿನಾಮೆ ನೀಡಿದ್ದು ಬೇಸರಗೊಂಡ ಮೂವರು ಸದಸ್ಯರಾದ ಶವಾದ್, ಲಿಸ್ಸಿ ಮೊನಾಲಿಸಾ, ವಿಮಲಾ ಪ್ರಸಾದ್ ರಾಜಿನಾಮೆ ನೀಡಿದ್ದಾರೆ ಮತ್ತು ನಾವೆಲ್ಲಾ ಡಿ 5.ರಂದು ರಾಜಿನಾಮೆ ಹಿಂಪಡೆಯುವ ಅರ್ಜಿ ಸಲ್ಲಿಸಿದ್ದೆವು ಆದರೆ ನನ್ನ ರಾಜಿನಾಮೆ ಮಾತ್ರ ಅಂಗೀಕಾರ ಮಾಡದೆ ..3 ಮಂದಿ ಸದಸ್ಯರ ರಾಜಿನಾಮೆ ಅಂಗೀಕಾರ ಮಾಡಿದ್ದು ಹೇಗೆ ಮತ್ತು ನನ್ನ ರಾಜಿನಾಮೆಯನ್ನು ಯಾಕೆ ಅಂಗೀಕಾರ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು ಸದಸ್ಯರು ಕೊಟ್ಟ ರಾಜಿನಾಮೆ ಪತ್ರ ಹಾಗು ರಾಜಿನಾಮೆ ಹಿಂಪಡೆದ ಅರ್ಜಿ ಸರಿಯಾಗಿಲ್ಲದಿದ್ದರೆ ಅದಕ್ಕೆ ಸೂಕ್ತ ಕಾರಣ ತಿಳಿಸಿ ಷರಾ ಬರೆದು ಅರ್ಜಿದಾರರಿಗೆ ಹಿಂಬರಹ ನೀಡಬೇಕು.ಅಥವಾ ರಾಜಿನಾಮೆ ಕೊಟ್ಟ ಮತ್ತು ಹಿಂಪಡೆಯಲು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿರುವ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಬೇಕು. ಆದರೆ ಇಲ್ಲಿ ಯಾವುದೇ ಕಾನೂನು ಪಾಲನೆಯಾಗಿಲ್ಲ. ಎಲ್ಲಾ 4 ಮಂದಿ ಸದಸ್ಯರು ರಾಜಿನಾಮೆ ಹಿಂಪಡೆಯಲು ಅರ್ಜಿಯನ್ನು ಪಂಚಾಯತ್‌ಗೆ ಸಲ್ಲಿಸಲಾಗಿದ್ದರೂ ದುರುದ್ದೇಶ ಪೂರಿತವಾಗಿ ಮೂರು ಮಂದಿ ಸದಸ್ಯರ ರಾಜಿನಾಮೆ ಅಂಗೀಕಾರ ಮಾಡಿದ್ದಾರೆ. ಅಧ್ಯಕ್ಷರ ಈ ಕ್ರಮ ಸರಿಯಲ್ಲ. ಇದು ದುರುದ್ದೇಶ ಪೂರಿತ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದು ಪಂಚಾಯತ್‌ಗೆ ಗೆದ್ದು ಬಂದ ಅಧ್ಯಕ್ಷ ಜಿ.ಕೆ.ಹಮೀದ್ ಹಾಗು ಅವರಿಗೆ ಬೆಂಬಲ ನೀಡುವ ಇತರ ಸದಸ್ಯರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅವರಿಗೆ ತಾಕತ್ತು ಇದ್ದರೆ ತಮ್ಮ ಗ್ರಾ.ಪಂ. ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ತಮ್ನ ಸ್ವಂತ ನೆಲೆಗಟ್ಟಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಆಗ ನಾನು ನಿಮ್ಮ ಸಾಮರ್ಥ್ಯ ಒಪ್ಪಿಕೊಳ್ಳುತೇನೆ ಪಕ್ಷದ ಬೆಂಬಲದಲ್ಲಿ ಗೆದ್ದು ಪಕ್ಷ ವಿರೋದಿ ಚಟುವಟಿಕೆ ಮಾಡುತ್ತಿರುವ ಮತ್ತು. ಅವರಿಗೆ ಬೆಂಬಲ ನೀಡುತ್ತಿರುವವರು ಟಿ ಎಂ ಶಹೀದ್ ಎಂದು ಬಹಿರಂಗ ಆರೋಪ ಮಾಡಿದರು, ಇವರು ಪಕ್ಷ ಕಟ್ಟಬೇಕೆ ಹೊರತು ಪಕ್ಷ ಒಡೆಯವ ಕೆಲಸ ಮಾಡಬಾರದು, ಪಕ್ಷ ಎಲ್ಲವನ್ನು ಗಮನಿಸುತ್ತಿದೆ ಇತಂಹವರ ವಿರುದ್ದ ಪಕ್ಷ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ಶೌವಾದ್ ಗೂನಡ್ಕ, ವಿಮಲಾ ಪ್ರಸಾದ್ ಉಪಸ್ಥಿತರಿದ್ದರು.
