ಮಂಗಳೂರು ಲಾಡ್ಜ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ  ವ್ಯಕ್ತಿಯ ಶವ ಪತ್ತೆ.

ಮಂಗಳೂರು ಲಾಡ್ಜ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆ.

ಮಂಗಳೂರು ಖಾಸಗಿ ಲಾಡ್ಜ್ ನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ವ್ಯಕ್ತಿ ವಿವಸ್ತ್ರವಾಗಿದ್ದ ಎಂದು ಹೇಳಲಾಗಿದೆ. ಸಾವಿನ‌ ಕುರಿತು ಅನುಮಾನ ಮೂಡುವ ರೀತಿಯಲ್ಲಿದ್ದು.ಮೃತ ವ್ಯಕ್ತಿಯನ್ನು ಅಬ್ದುಲ್ ಕರೀಮ್ ತಂದೆ ಮೊಹಮ್ಮದ್, ಪೈವಳಿಕೆ ಗ್ರಾಮ ಪಂಚಾಯತ್, ಚಿಪ್ಪಾರ್ ಪೋಸ್ಟ್ ಕಾಸರಗೋಡು ಎಂದು ಗುರುತಿಸಲಾಗಿದೆ.


ಮೃತದೇಹ ಪತ್ತೆಯಾದ ರೂಂ ನಲ್ಲಿ ಕೆಲ ಮಾತ್ರೆಗಳು ಪತ್ತೆಯಾಗಿದ್ದು, ಬುರ್ಖಾಧಾರಿ ಮಹಿಳೆಯೊಬ್ಬಳು ಮೃತ ವ್ಯಕ್ತಿಯನ್ನು ಭೇಟಿಯಾಗಿರುವ ಬಗ್ಗೆ ಮಾಹಿತಿ ಪೋಲಿಸ್ ಇಲಾಖೆಗೆ ದೊರೆತ್ತಿದ್ದು.ಇದು ಆತ್ಮಹತ್ಯೆಯಾ ಅಥಾವ ಕೊಲೆಯೋ ಎನ್ನುವ ನಿಟ್ಟಿನಲ್ಲಿ ಪೋಲಿಸರು ತನಿಖೆ ನಡೆಸುತ್ತಿದ್ದಾರೆ, ಮೃತ ವ್ಯಕ್ತಿ ಹಿಂದೆ ಮಂಗಳೂರಿನಲ್ಲಿ ಹೋಟೆಲ್ ನಡೆಸುತ್ತಿದ್ದ ಎಂದು ಹೇಳಲಾಗಿದೆ.ಸ್ಥಳಕ್ಕೆ ಪೋಲಿಸ್ ಕಮಿಷನರ್ ಶಶಿಕುಮಾರ್ ನೇತ್ರತ್ವದ ತಂಡ ಭೇಟಿ ನೀಡಿದ್ದು ತನಿಖೆ ಚುರುಕುಗೊಂಡಿದೆ ಎಂದು ತಿಳಿದು ಬಂದಿದೆ.

ರಾಜ್ಯ